ಚಿನ್ನದ ಮೂಗುತಿಗಳ ಜಪ್ತಿ

7

ಚಿನ್ನದ ಮೂಗುತಿಗಳ ಜಪ್ತಿ

Published:
Updated:

ಕೋಲಾರ: ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಮೀರ್‌ ಪಾಷಾ ಪರ ನಗರದ ಜಯನಗರ ಬಡಾವಣೆ ಬಳಿ ಶನಿವಾರ ಮತದಾರರಿಗೆ ಚಿನ್ನದ ಮೂಗುತಿ ಹಂಚುತ್ತಿದ್ದ ನಾಲ್ಕು ಮಂದಿ ಕಾರ್ಯಕರ್ತರನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು 190 ಮೂಗುತಿ ಹಾಗೂ ₹ 31 ಸಾವಿರ ವಶಪಡಿಸಿ

ಕೊಂಡಿದ್ದಾರೆ.

ನಗರದ ಮುರಳೀಧರ, ನಾರಾಯಣಸ್ವಾಮಿ, ಬಾಬು ಮತ್ತು ಕೆ.ನಾರಾಯಣಸ್ವಾಮಿ ಬಂಧಿತರು. ಆರೋಪಿಗಳು ಬೈಕ್‌ಗಳಲ್ಲಿ ಸಂಚರಿಸುತ್ತಾ ಮತದಾರರಿಗೆ ಮೂಗುತಿ ಹಂಚುತ್ತಿದ್ದರು. ಬಂಧಿತರಿಂದ ₹ 23 ಸಾವಿರ ಮೌಲ್ಯದ ಮೂಗುತಿಗಳು, ಹಣ ಹಾಗೂ 3 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ಓಂಶಕ್ತಿ ಚಲಪತಿ ಪರ ಗಾಂಧಿನಗರದಲ್ಲಿ ಹಣ ಹಂಚುತ್ತಿದ್ದ ಆರೋಪದ ಮೇಲೆ ಮಹೇಶ್‌, ಮಂಜುನಾಥ್‌ ಮತ್ತು ಶ್ರೀನಿವಾಸ್‌ ಎಂಬುವರನ್ನು ಬಂಧಿಸಿ ₹ 11 ಸಾವಿರ ಹಾಗೂ ಎರಡು ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry