‘ಬಟ್ಲರ್‌ ಬ್ಯಾಟಿಂಗ್‌ ಅಮೋಘ’

7

‘ಬಟ್ಲರ್‌ ಬ್ಯಾಟಿಂಗ್‌ ಅಮೋಘ’

Published:
Updated:
‘ಬಟ್ಲರ್‌ ಬ್ಯಾಟಿಂಗ್‌ ಅಮೋಘ’

ಜೈಪುರ: ‘ನಮ್ಮ ತಂಡದ ವಿರುದ್ಧ ಜೋಸ್‌ ಬಟ್ಲರ್‌ ಅವರು ಸೊಗಸಾದ ಬ್ಯಾಟಿಂಗ್‌ ಮಾಡಿದರು. ಅವರದು ಅದ್ಭುತ ಇನ್ನಿಂಗ್ಸ್‌’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿದರು.

ಶುಕ್ರವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ತಂಡವು 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿ

ಸಿತ್ತು. ಜೋಸ್‌ ಬಟ್ಲರ್‌ ಅವರ ಅರ್ಧಶತಕದ ನೆರವಿನಿಂದ (95, 60 ಎಸೆತ, 2 ಸಿ, 11 ಬೌಂ) ರಾಜಸ್ಥಾನ್‌ ರಾಯಲ್ಸ್‌ ತಂಡವು 6 ವಿಕೆಟ್‌ ಕಳೆದುಕೊಂಡು ಗೆದ್ದಿತ್ತು.

‘ಅವರ ಸೊಗಸಾದ ಬ್ಯಾಟಿಂಗ್‌ ಮುಂದೆ ನಮ್ಮ ಯೋಜನೆಗಳೆಲ್ಲ ತಲೆಕೆಳಗಾದವು. ಇನಿಂಗ್ಸ್‌ನ ಕೊನೆಯವರೆಗೂ ಅವರು ಆಡಿದರು. ಅವರನ್ನು ಮೊದಲೇ ಔಟ್‌ ಮಾಡಿದ್ದರೆ, ಫಲಿತಾಂಶ ನಮ್ಮ ಪರವಾಗಿರುತ್ತಿತ್ತು’ ಎಂದು ಫ್ಲೆಮಿಂಗ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry