ವಾಸ್ತು ಬದಲಿಸಿದ ಜಿ.ಟಿ.ಡಿ

7

ವಾಸ್ತು ಬದಲಿಸಿದ ಜಿ.ಟಿ.ಡಿ

Published:
Updated:

ಬೆಂಗಳೂರು: ಇವಿಎಂ ಇಟ್ಟಿರುವ ದಿಕ್ಕು ಸರಿ ಇಲ್ಲ ಎಂದು ಹೇಳಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ‘ವಾಸ್ತು’ವಿಗೆ ಅನುಗುಣವಾಗಿ ಬದಲಿಸಿದರು.

ಇದೇ ಕ್ಷೇತ್ರದ ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಚಲಾಯಿಸುವುದಕ್ಕೆ ಮುನ್ನ ಸಿದ್ದ ರಾಮನಹುಂಡಿಯಲ್ಲಿರುವ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತೆರಳಿ ಗೆಲುವಿಗಾಗಿ ಪೂಜೆ ಸಲ್ಲಿಸಿದರು.

ಬಾದಾಮಿ ಮತ್ತು ಮೊಳಕಾಲ್ಮುರು ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತದಾನಕ್ಕೆ ಮೊದಲು ಕೈಯಲ್ಲಿ ಜಪ ಮಣಿ ಹಿಡಿದು ಇಷ್ಟ ದೈವದ ಜಪ ಮಾಡಿದರು. ಗೋಪೂಜೆಯನ್ನೂ ಮಾಡಿದರು. ಮಹಾಲಕ್ಷ್ಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರಬಾಬು ಕೂಡ ಗೋಪೂಜೆ ಮಾಡಿ ಮತದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry