ಶನಿವಾರ, ಮಾರ್ಚ್ 6, 2021
19 °C

ಕೆಲವು ಕಡೆ ರಾತ್ರಿ 8 ರವರೆಗೂ ಮತದಾನ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ಕಡೆ ರಾತ್ರಿ 8 ರವರೆಗೂ ಮತದಾನ !

ಬೆಂಗಳೂರು: ರಾಜ್ಯದ ಕೆಲವು ಮತಗಟ್ಟೆಗಳಲ್ಲಿ ರಾತ್ರಿ 8 ಗಂಟೆಯವರೆಗೂ ಮತದಾನ ನಡೆದಿದೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ಈ ಮತಗಟ್ಟೆಗಳಲ್ಲಿ ಮತದಾರರು ಸಂಜೆ 6 ಗಂಟೆಗೂ ಮೊದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಆದ್ದರಿಂದ ಅವರೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಯಿತು. ಇದರಿಂದ ಶೇಕಡವಾರು ಮತದಾನ ಪ್ರಮಾಣ ಹೆಚ್ಚಾಗುತ್ತದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಮತದಾನಕ್ಕೂ ಮೊದಲೇ ಮತ ಯಂತ್ರಗಳ ಅಣಕು ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ಮಾಡಲಾದ 64,897 ಬ್ಯಾಲೆಟ್ ಯೂನಿಟ್‌ಗಳಲ್ಲಿ 212 ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. 57,782 ಕಂಟ್ರೋಲ್ ಯೂನಿಟ್‌ಗಳಲ್ಲಿ 340 ಹಾಗೂ 57,786 ವಿವಿ ಪ್ಯಾಟ್ ಗಳಲ್ಲಿ 698 ಯಂತ್ರಗಳು ಕೆಟ್ಟು ಹೋಗಿದ್ದವು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು ಎಂದರು.

ಈ ಬಾರಿ ಒಟ್ಟು 2,65,731 ಪೋಸ್ಟಲ್ ಬ್ಯಾಲೆಟ್‌ಗಳು ಬಳಕೆಯಾಗಿವೆ. ಚುನಾವಣಾ ಪ್ರಕ್ರಿಯೆ ಮೇಲ್ವಿಚಾರಕರಾಗಿ 154 ಸಾಮಾನ್ಯ ವೀಕ್ಷಕರು, 136 ವೆಚ್ಚ ವೀಕ್ಷಕರು, 35 ಪೊಲೀಸ್‌ ವೀಕ್ಷಕರು ಮತ್ತು 9,781 ಮೈಕ್ರೋ ವೀಕ್ಷಕರು ಇದ್ದರು. 3,20,606 ಚುನಾವಣಾ ಸಿಬ್ಬಂದಿ, 82,157 ಪೊಲೀಸರನ್ನು ಬಳಸಿಕೊಳ್ಳಲಾಗಿತ್ತು. 3,500 ಮತಗಟ್ಟೆಗಳ ವೆಬ್ ಕಾಸ್ಟಿಂಗ್‌ ಮಾಡಲಾಗಿದೆ ಎಂದೂ ಹೇಳಿದರು.

ದಾಖಲೆ ಪ್ರಮಾಣದ ವಶ: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ನಗದು, ಮದ್ಯೆ, ಗಾಂಜಾ, ಇತರೆ ಸರಕುಗಳು ಸೇರಿ ₹ 182.39 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಜೀವ್‌ ಕುಮಾರ್‌ ಹೇಳಿದರು.

ರಾಜ್ಯದಲ್ಲಿ ಒಟ್ಟು 600 ಪಿಂಕ್ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.