ಬೇಸಿಗೆ ರೇಸ್‌ಗಳು ಮುಂದೂಡಿಕೆ

7

ಬೇಸಿಗೆ ರೇಸ್‌ಗಳು ಮುಂದೂಡಿಕೆ

Published:
Updated:

ಬೆಂಗಳೂರು: ಭಾನುವಾರದಿಂದ ಆರಂಭವಾಗಬೇಕಿದ್ದ ಬೇಸಿಗೆ ರೇಸ್‌ಗಳನ್ನು ಮುಂದೂಡಲಾಗಿದೆ. ಮೇ 19ರಿಂದ ರೇಸ್‌ಗಳು ಆರಂಭವಾಗಲಿವೆ.

ಶನಿವಾರ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆಯು ಮೇ 15ರಂದು ನಡೆಯಲಿದೆ. ಅಲ್ಲಿಯವರೆಗೆ ಮತಯಂತ್ರಗಳ ಭದ್ರತಾ ಕಾರ್ಯಕ್ಕೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಆ ಕಾರಣಕ್ಕಾಗಿ ರೇಸ್‌ಗಳಿಗೆ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದರಿಂದ ಬಿಟಿಸಿ (ಬೆಂಗಳೂರು ಟರ್ಫ್‌ ಕ್ಲಬ್) ಈ ನಿರ್ಧಾರ ಕೈಗೊಂಡಿದೆ.

‘ಪೊಲೀಸ್ ಇಲಾಖೆಯಿಂದ ನಮಗೆ ಪತ್ರ ಬಂದಿದೆ. ಮತ ಎಣಿಕೆ ಕಾರ್ಯಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿ

ಸಲಾಗುತ್ತಿದೆ. ಆದ್ದರಿಂದ ರೇಸ್‌ಗಳಿಗೆ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಮುಂದಿನ ವಾರದವರೆಗೆ ರೇಸ್‌ಗಳನ್ನು ಮುಂದೂಡಲಾಗಿದೆ’ ಎಂದು ಬಿಟಿಸಿ ಮುಖ್ಯಸ್ಥ ಹರಿಮೋಹನ್ ನಾಯ್ಡು ತಿಳಿಸಿದ್ದಾರೆ.

ಮೇ 13 ಮತ್ತು 14ರಂದು ನಿಗದಿಯಾಗಿದ್ದ ರೇಸ್‌ಗಳು ಕ್ರಮವಾಗಿ 19 ಮತ್ತು 20ರಂದು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry