ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಕೇಂದ್ರದತ್ತ ಮತಯಂತ್ರ

ಭಾನುವಾರ ಮುಂಜಾನೆ ತಲುಪುವ ನಿರೀಕ್ಷೆ
Last Updated 13 ಮೇ 2018, 6:55 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಎಲ್ಲ 1,858 ಮತಗಟ್ಟೆಗಳಿಂದ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ಭದ್ರತಾ ಕೇಂದ್ರದತ್ತ ತರಲಾಗುತ್ತಿದೆ. ಭಾನುವಾರ ಬೆಳಿಗ್ಗೆಯ ವೇಳೆಗೆ ಎಲ್ಲ ಯಂತ್ರಗಳು ನಗರದ ಬೋಂದೆಲ್‌ನ ಮಹಾತ್ಮ ಗಾಂಧಿ ಶತಾಬ್ದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿರುವ ಭದ್ರತಾ ಕೇಂದ್ರವನ್ನು ತಲುಪಲಿವೆ.

ಮತದಾನ ಮುಗಿದ ಬಳಿಕ ಎಲ್ಲ ಮತಗಟ್ಟೆಗಳಿಂದ ಮತಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಆಯಾ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರಗಳಿಗೆ ತರಲಾಗುತ್ತಿದೆ. ಅಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಡಿ–ಮಸ್ಟರಿಂಗ್‌ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಮತಯಂತ್ರಗಳನ್ನು ಭದ್ರತಾ ವಾಹನದಲ್ಲಿ ತುಂಬಿಸಿ, ಪೊಲೀಸ್‌ ಭದ್ರತೆ
ಯಲ್ಲಿ ಭದ್ರತಾ ಕೇಂದ್ರಕ್ಕೆ ತರಲಾಗುತ್ತದೆ.

‘ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಮತ್ತು ಮೂಡುಬಿದಿರೆ ಕ್ಷೇತ್ರಗಳ ಮತಯಂತ್ರಗಳು ಸ್ವಲ್ಪ ಬೇಗ ಭದ್ರತಾ ಕೇಂದ್ರ ತಲುಪುವ ಸಾಧ್ಯತೆ ಇದೆ. ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳ ಗ್ರಾಮೀಣ ಪ್ರದೇಶಗಳಿಂದ ಮಸ್ಟರಿಂಗ್‌ ಕೇಂದ್ರಕ್ಕೆ ಮತಯಂತ್ರಗಳು ತಲುಪುವುದು ತಡವಾಗುತ್ತದೆ. ಅಲ್ಲಿ ಡಿ ಮಸ್ಟರಿಂಗ್‌ ಮುಗಿಸಿ, ಭದ್ರತಾ ಕೇಂದ್ರಕ್ಕೆ ತರುವಾಗ ಭಾನುವಾರ ಬೆಳಿಗ್ಗೆ ಆಗಬಹುದು’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಮೂರು ಹಂತದ ಭದ್ರತೆ: ಬೋಂದೆಲ್‌ನ ಮಹಾತ್ಮ ಗಾಂಧಿ ಶತಾಬ್ದಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮಂಗಳವಾರ ನಡೆಯಲಿದೆ. ಅಲ್ಲಿಯೇ ಮತಯಂತ್ರಗಳನ್ನು ಇರಿಸಲು ಭದ್ರತಾ ಕೇಂದ್ರ ಸ್ಥಾಪಿಸಲಾಗಿದೆ. ಭದ್ರತಾ ಕೇಂದ್ರಕ್ಕೆ ಪೊಲೀಸ್‌, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿಯ ತಂಡಗಳಿಂದ 3 ಹಂತದ ಭದ್ರತೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT