ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿಯಲ್ಲಿ ಶೇ 63.15 ಮತದಾನ

ಯುವಕರ ನೆರವು ಪಡೆದು ಮತಗಟ್ಟೆಗೆ ಬಂದ ವೃದ್ಧರು, ಅಂಗವಿಕಲರು
Last Updated 13 ಮೇ 2018, 9:22 IST
ಅಕ್ಷರ ಗಾತ್ರ

ಮಾನ್ವಿ: ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಶೇ 63.15ರಷ್ಟು ಮತದಾನವಾಗಿದೆ. ಪಟ್ಟಣದ ಕುಂಬಾರವಾಡಿಯ ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಯಂತ್ರದ ದೋಷದಿಂದ ಮತದಾನ ಆರಂಭವಾಗಲು ವಿಳಂಬವಾಯಿತು.

ಚುನಾವಣಾ ಕಾರ್ಯಕ್ಕೆ ನಿಯೋಜನೆ ಗೊಂಡ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದೋಷ ಸರಿಪಡಿಸಿದ ನಂತರ 1 ಗಂಟೆ ತಡವಾಗಿ ಮತದಾನ ಆರಂಭವಾಯಿತು. ಬೆಳಿಗ್ಗೆ ಮತದಾನ ಪ್ರಕ್ರಿಯೆ ಚುರುಕಾಗಿತ್ತು. ಮತದಾರರು ಎಲ್ಲ ಮತಗಟ್ಟೆಗಳಲ್ಲಿ ಮತದಾನಕ್ಕಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವೃದ್ಧರು, ಅಂಗವಿಕಲರು ಮಕ್ಕಳು, ಯುವಕರ ನೆರವಿನಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ 1ಗಂಟೆ ಸುಮಾರಿಗೆ ಬಿಸಿಲನ ಬೇಗೆ ಹೆಚ್ಚಿದ್ದರಿಂದ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಮಧ್ಯಾಹ್ನ 2ಗಂಟೆ ಸುಮಾರಿಗೆ ಅಂದಾಜು ಶೇ 38 ಮತದಾನವಾಗಿತ್ತು. ಸಂಜೆ 4 ಗಂಟೆಯಿಂದ ಮತದಾನ ಚುರುಕಿನಿಂದ ನಡೆಯಿತು. ಸುಗಮ ಮತದಾನಕ್ಕಾಗಿ ಎಲ್ಲೆಡೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT