ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ: ವಿವಿಧೆಡೆ ಚುರುಕಿನ ಮತದಾನ

Last Updated 13 ಮೇ 2018, 9:53 IST
ಅಕ್ಷರ ಗಾತ್ರ

ಕಾರಟಗಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಮತದಾನ ಶನಿವಾರ ಸುಗಮವಾಗಿ ನಡೆಯಿತು. ಮೈಲಾಪುರ, ಯರಡೋಣ, ಪಟ್ಟಣದ ನವಲಿ ರಸ್ತೆಯ ಮತದಾನ ಕೇಂದ್ರದ ಬಳಿ ಸಣ್ಣಪುಟ್ಟ ವಾಗ್ವಾದ ಬಿಟ್ಟರೆ ಮತದಾನ ಶಾಂತಿಯುತವಾಗಿ ನಡೆಯಿತು.

ಬಿರು ಬಿಸಿಲಿದ್ದ ಕಾರಣ ಬೆಳಗಿನಿಂದಲೇ ಮತದಾನ ಮಾಡಲು ಮಹಿಳಾ ಮತದಾರರು ಮುಂದಾದರು. ವಯೋವೃದ್ಧರು, ಅಂಗವೈಕಲ್ಯ ಸಮಸ್ಯೆಯಿಂದ ಬಳಲುವವರು ತಮ್ಮ ಸಹಾಯಕರೊಂದಿಗೆ ಉತ್ಸಾಹದಿಂದಲೇ ಮತ ಚಲಾಯಿಸಿ ತೆರಳಿದರು.

ಮತದಾನ ಕೇಂದ್ರದ ನಿಗದಿತ ಅಂತರ ಬಿಟ್ಟು ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರು ಜಮಾವಣೆ ಗೊಂಡಿದ್ದರು. ಎರಡೂ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಕರೆ ತರುತ್ತಿರುವುದು, ಮತದಾನದ ಬಳಿಕ ಅವರ ನಿವಾಸಗಳಿಗೆ ಕರೆದುಕೊಂಡು ಹೋಗುತ್ತಿರುವುದು ವಿಶೇಷವಾಗಿತ್ತು. ಸರ್ಕಾರಿ ಕಾಲೇಜಿನ ಮತಕೇಂದ್ರದಲ್ಲಿ ಶಾಸಕ ಶಿವರಾಜ್ ತಂಗಡಗಿ ಪತ್ನಿ ವಿದ್ಯಾರೊಂದಿಗೆ, ಬಿಜೆಪಿ ಅಭ್ಯರ್ಥಿ ಬಸವರಾಜ್ ದಡೇಸುಗೂರು ಪತ್ನಿ ಸರೋಜಮ್ಮ ಅವರೊಂದಿಗೆ ಮತದಾನ ಮಾಡಿದರು.

ಮಾಜಿ ಸಚಿವ, ಬಿಜೆಪಿ ಮುಖಂಡ ಸಾಲೋಣಿ ನಾಗಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೇಂದ್ರದಲ್ಲಿ ಸಂಜೆ ಮತದಾನ ಮಾಡಿದರು. ಸಂಜೆ 5 ಗಂಟೆಗೆ ಗುಡುಗು, ಸಿಡಿಲು ಸಹಿತ ಕೆಲ ನಿಮಿಷ ಮಳೆ ಸುರಿದು, ವಾತಾವರಣವನ್ನು ತಂಪಾಗಿಸಿತು. ಆದರೆ ಮತದಾನ ಮುಂದುವರೆದಿತ್ತು.

ಮಾಜಿ ಸಚಿವ ಸಾಲೋಣಿ ನಾಗಪ್ಪ ಮಾತನಾಡಿ, ಕ್ಷೇತ್ರದಾದ್ಯಂತ ಸಂಚರಿಸಿದ್ದೇನೆ. ಎಲ್ಲೆಡೆ ಬಿಜೆಪಿಗೆ ಮತದಾನ ಅಧಿಕವಾಗಿರುವ ಮಾಹಿತಿ ದೊರಕಿದೆ. ಕನಿಷ್ಟ 15 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ ಸಾಧಿಸಲಿದ್ದಾರೆ ಎಂದರು.

ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ್ ತಂಗಡಗಿ ಪ್ರತಿಕ್ರಿಯಸಿ ಗೆಲುವು ಖಚಿತ. ಅಂತರ ಕಡಿಮೆಯಾಗಬಹುದು. ಆದರೂ 10 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾದಿಸಲಿದ್ದೇನೆ ಎಂದರು.

ಬಿಜೆಪಿ ಅಭ್ಯರ್ಥಿ ಬಸವರಾಜ್ ದಡೇಸುಗೂರು ಮಾತನಾಡಿ, ಗೆಲ್ಲುವುದು ಶತಸಿದ್ಧ. ನಮ್ಮ ಲೆಕ್ಕಾಚಾರ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT