ಮತಗಟ್ಟೆಯಲ್ಲಿ ಹಬ್ಬದ ಸಡಗರ

7
ಕೊಳ್ಳೇಗಾಲ; ಗಮನಸೆಳೆದ ಹಸಿರು ತೋರಣ, ಚಪ್ಪರ

ಮತಗಟ್ಟೆಯಲ್ಲಿ ಹಬ್ಬದ ಸಡಗರ

Published:
Updated:
ಮತಗಟ್ಟೆಯಲ್ಲಿ ಹಬ್ಬದ ಸಡಗರ

ಕೊಳ್ಳೇಗಾಲ: ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರದ ಮಾದರಿ ಮತಗಟ್ಟೆಯಲ್ಲಿ ಶನಿವಾರ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ತಾಲ್ಲೂಕಿನ ಸೂರಾಪುರ, ಮೆಲ್ಲಳ್ಳಿ ಮೋಳೆ, ನಗರದ ಬಿ.ಎಂ.ಎಚ್.ಪಿ ಶಾಲೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೆ ಪ್ರಥಮ ಬಾರಿಗೆ ಮತದಾನ ನಡೆಯುವ ಮತಗಟ್ಟೆಯಲ್ಲಿ ಹಸಿರು ತೋರಣ, ಚಪ್ಪರ, ರಂಗೋಲಿ ಹಾಗೂ ಮತಗಟ್ಟೆ ಒಳಗಟೆ ಬಣ್ಣದ ಕಾಗದಗಳು, ಬಲೂನು ಬಾಳೆಕಂದುಗಳನ್ನು ಕಟ್ಟಿ ಶೃಂಗಾರಗೊಳಿಸಲಾಗಿತ್ತು.

ಮತದಾನ ಮಾಡಲು ಮಕ್ಕಳನ್ನು ಕರೆದುಕೊಂಡು ಬಂದವರಿಗೆ ಆಟವಾಡಲು ವಿಶೇಷ ಕೊಠಡಿಯನ್ನು ಸಹ ನಿರ್ಮಿಸಲಾಗಿತ್ತು. ಅಂಗವಿಕಲರು ಬಂದರೆ ಅವರಿಗೆ ವ್ಹೀಲ್‌ಚೇರ್ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಸಹ ಮಾಡಲಾಗಿತು. ‘ಗ್ರಾಮದ ಪ್ರತಿಯೊಬ್ಬರು ಮತದಾನ ಮಾಡಿ’ ಅದು ನಮ್ಮ ಹಕ್ಕು ಎಂದು ತಿಳಿಸಿದರು.

ವಿಶೇಷವಾಗಿ ನಗರದ ಮಹದೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಪಿಂಕ್ ಬೂತ್‍ಗಳನ್ನು ತೆರೆಯಲಾಗಿತ್ತು. ವಿಶೇಷ ಎಂದರೆ ಚುನಾವಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಿಳಿಗೆಂಪು ಬಟ್ಟೆಯನ್ನು ಧರಿಸಿದ್ದರು. ಗೋಡೆ, ಕಿಟಕಿ, ಬಾಗಿಲು ಹೋರಾಂಡ ಮತ್ತು ಒಳಾಂಗಣ ಅದೇ ಬಣ್ಣದಿಂದ ಅಲಂಕಾರ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry