ಗುರುವಾರ , ಮಾರ್ಚ್ 4, 2021
30 °C

ಪೂರ್ವ ದ್ವೇಷದ ಹಿನ್ನೆಲೆ: ರಿಕ್ಷಾ ಚಾಲಕನಿಗೆ ಇರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೂರ್ವ ದ್ವೇಷದ ಹಿನ್ನೆಲೆ: ರಿಕ್ಷಾ ಚಾಲಕನಿಗೆ ಇರಿತ

ಮಂಗಳೂರು (ಕಡಬ):  ರಿಕ್ಷಾ ಚಾಲಕನೋರ್ವನಿಗೆ ತಂಡವೊಂದು ಬರ್ಬರವಾಗಿ ಇರಿದು ಪರಾರಿಯಾದ ಘಟನೆ ಇಲ್ಲಿನ ನೆಕ್ಕಿತ್ತಡ್ಕ ಎಂಬಲ್ಲಿ ಭಾನುವಾರ ಅಪರಾಹ್ನ ನಡೆದಿದೆ.

ಇರಿತಕ್ಕೊಳಗಾದ ರಿಕ್ಷಾ ಚಾಲಕನನ್ನು ಐತ್ತೂರು ಗ್ರಾಮದ ಕೇನ್ಯ ನಿವಾಸಿ ಉಮೇಶ್ (30) ಎಂದು ಗುರುತಿಸಲಾಗಿದೆ. ಈತ ಕಡಬದಿಂದ ಮರ್ಧಾಳ ಕಡೆಗೆ ತನ್ನ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಜಿನಡಿ ಕ್ರಾಸ್ ಎಂಬಲ್ಲಿ ಕೆಂಪು ಕಾರಿನಲ್ಲಿ ಬಂದ ತಂಡವೊಂದು ರಿಕ್ಷಾವನ್ನು ಅಡ್ಡಗಟ್ಟಿದ್ದು, ಅವರಿಂದ ಸುಮಾರು 200 ಮೋಟರ್ ದೂರ‌ ಓಡಿ ತಪ್ಪಿಸಿಕೊಂಡನಾದರೂ ನೆಕ್ಕಿತ್ತಡ್ಕ ದರ್ಗಾ ಬಳಿ ತಂಡವೊಂದು ಹಿಗ್ಗಾಮುಗ್ಗಾ ಇರಿದಿದು ಪರಾರಿಯಾಗಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕಡಿದು ಕೊಲೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅಡಿಷನಲ್ ಎಸ್ಪಿ ಸಜಿತ್, ಡಿವೈಎಸ್ಪಿ ಶ್ರೀನಿವಾಸ್, ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್, ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ತಾಲೂಕು ಪಂಚಾಯತ್ ಸದಸ್ಯ  ಗಣೇಶ್ ಕೈಕುರೆ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಹಲ್ಲೆಗೊಳಗಾದ ಉಮೇಶ್)

ಗಾಯಗೊಂಡೊರುವ ಉಮೇಶ್ ರೌಡಿ ಪಟ್ಟಿಯಲ್ಲಿದ್ದಾನೆ. ಈತ ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಯ ಸಂಬಂಧಿ ಕಿರಣ್ ಎಂಬಾತನ ಜೊತೆಗೆ ಉಮೇಶ್ ಗೆ ದ್ವೇಷವಿತ್ತು. ಉಮೇಶ್ ಕಿರಣ್ ನನ್ನು ಕೊಲೆ‌ ಮಾಡಲು ಯತ್ನಿಸಿದ್ದ. ಕಿರಣ್ ಐವರ ಗುಂಪಿನೊಂದಿಗೆ ಬಂದು ಭಾನುವಾರ ಮಧ್ಯಾಹ್ನ ಉಮೇಶ್ ಕೊಲೆಗೆ ಯತ್ನಿಸಿದ್ದಾನೆ. ಕಿರಣ್ ಕೂಡ ರೌಡಿಶೀಟರ್ ಎಂದು ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.