ಸೋಮವಾರ, ಮಾರ್ಚ್ 8, 2021
24 °C

ಪಾಣಿಪತ್‌ಗೆ ನೀತಾ ವಸ್ತ್ರವಿನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಣಿಪತ್‌ಗೆ ನೀತಾ ವಸ್ತ್ರವಿನ್ಯಾಸ

ಅಶುತೋಷ್‌ ಗೋವಿತ್ರಿಕರ್‌ ಪಾಣಿಪತ್‌ ಚಿತ್ರಕ್ಕೆ ನೀತಾ ಲುಲ್ಲ ಜೊತೆಗೆ ಈಗಾಗಲೇ ವಸ್ತ್ರವಿನ್ಯಾಸಕ್ಕೆ ಸಂಶೋಧನೆ ಆರಂಭಿಸಿದ್ದಾರೆ.

ಈ ಹಿಂದೆ ನೀತಾ ಲುಲ್ಲಾ ಅಶೋತೋಷ್‌ ಜೊತೆಗೆ ಜೋಧಾ ಅಕ್ಬರ್‌ಗೂ ಕೈ ಜೋಡಿಸಿದ್ದರು. ಮೊಘಲಾಯ್‌ ಕಾಲದ ವಸ್ತ್ರವಿನ್ಯಾಸ, ವರ್ಣ ಸಂಯೋಜನೆ, ಆಭರಣ ಸಂಗ್ರಹ ಹೀಗೆ ಒಟ್ಟೊಟ್ಟಿಗೆ ಸಂಶೋಧನೆ ಮಾಡಿದ್ದರು. ಅದಾದ ನಂತರ ಮೊಹೆಂಜೊದಾರೊ ಚಿತ್ರಕ್ಕಾಗಿಯೂ ನೀತಾ ಕೈಜೋಡಿಸಿದ್ದರು.

ಜೋಧಾ ಅಕ್ಬರ್‌ನಲ್ಲಿ ವೈಭವ ಪೂರ್ಣ ವಸ್ತ್ರ ಸಂಗ್ರಹವಿದ್ದರೆ, ಮೊಹೆಂಜೊದಾರೊದಲ್ಲಿ ಕೇವಲ ಸೆಣಬು ಮತ್ತು ಪ್ಯಾಪಿರಸ್‌ಗಳಿಂದ ವಸ್ತ್ರವಿನ್ಯಾಸ ಮಾಡುವ ಸವಾಲು ನೀತಾ ಮುಂದೆ ಇತ್ತು.

ಒಂದು ಕಾಲದ ವಸ್ತ್ರವಿನ್ಯಾಸವನ್ನು ಪ್ರಸ್ತುತ ಪಡಿಸುವುದು ಸುಲಭವಲ್ಲ. ಆ ವಸ್ತ್ರ ಸಂಗ್ರಹ ಆ ಕಾಲದ ವರ್ಗೀಕೃತ ಶ್ರೇಣಿಯನ್ನೂ ಬಿಂಬಿಸುವಂತಿರಬೇಕು. ಇವೆರಡೂ ಸವಾಲುಗಳನ್ನು ಆಗ ಅಶುತೋಷ್‌ ಜೊತೆಗೆ ಚರ್ಚಿಸಿ ನಿವಾರಿಸಿಕೊಂಡೆ.

ಕಂಗನಾ ರನೋಟ್‌ ಅಭಿನಯದ ’ಮಣಿಕರ್ಣಿಕಾ’ಗೆ ಗುಜರಾತಿ ವಸ್ತ್ರ ಇತಿಹಾಸವನ್ನು ಗಮನಿಸಬೇಕಾಗಿತ್ತು. ಪ್ರತಿ ಚಿತ್ರಗಳೂ ಪ್ರತಿ ಪ್ರೊಜೆಕ್ಟ್‌ಗಳು ವಸ್ತ್ರೋದ್ಯಮವಷ್ಟೇ ಅಲ್ಲ, ವಸ್ತ್ರಗಳ ಇತಿಹಾಸದ ಬಗೆಗೆ ಹೊಸ ಹೊಳಹುಗಳನ್ನು ಹುಟ್ಟುಹಾಕುತ್ತವೆ. ಹೊಸ ಚಿಂತನೆಯೊಂದು ಹುಟ್ಟುತ್ತದೆ. ದೇವದಾಸ್‌ ಚಿತ್ರಕ್ಕೆ ವಿನ್ಯಾಸ ಮಾಡುವಾಗ ಬಂಗಾಳಿ ಸಂಸ್ಕೃತಿಯನ್ನು ಅಧ್ಯಯನ ಮಾಡಿದ್ದೆ.

ಇದೀಗ ಮರಾಠಾ ಸಂಸ್ಕೃತಿ ಅಧ್ಯಯನ ಆರಂಭಿಸಿರುವೆ. ನನ್ನ ಮತ್ತು ಅಶುತೋಷ್‌ ಜೋಡಿ ಸುದೀರ್ಘ ಅಧ್ಯಯನದ ಹಿನ್ನೆಲೆಯಲ್ಲಿ ಪರದೆಯ ಮೇಲೆ ಒಂದು ಮ್ಯಾಜಿಕ್‌ ಸೃಷ್ಟಿಸುತ್ತದೆ. ಈಗಲೂ ಅದೇ ನಿರೀಕ್ಷೆಯಲ್ಲಿರುವೆ.

ಪಾಣಿಪತ್‌ ಚಿತ್ರದಲ್ಲಿ ಅರ್ಜುನ್‌ ಕಪೂರ್‌, ಸಂಜಯ್‌ ದತ್‌ ಹಾಗೂ ಕೃತಿ ಸನಾನ್‌ ಅಭಿನಯಿಸುತ್ತಿದ್ದಾರೆ. ಅರ್ಜುನ್‌ ಕಪೂರ್‌ ಮರಾಠಾ ನಾಯಕ ಸದಾಶಿವರಾವ್‌ ಭಾವು ಪಾತ್ರದಲ್ಲಿಯೂ ಸಂಜಯ್‌ ದತ್‌ ಅಹ್ಮದ್‌ ಶಾ ದುರ್ರಾನಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಡಿಸೆಂಬರ್‌ 6 2019ರಂದು ತೆರೆ ಕಾಣುವ ನಿರೀಕ್ಷೆ ಇದೆ. v

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.