ಮಂಟೋ ಪಾತ್ರದಲ್ಲಿ ನವಾಜುದ್ದೀನ್‌

7

ಮಂಟೋ ಪಾತ್ರದಲ್ಲಿ ನವಾಜುದ್ದೀನ್‌

Published:
Updated:
ಮಂಟೋ ಪಾತ್ರದಲ್ಲಿ ನವಾಜುದ್ದೀನ್‌

ಅನೇಕ ದಿನಗಳ ನಂತರ ಬಹುನಿರೀಕ್ಷಿತ ನವಾಜುದ್ದೀನ್‌ ಸಿದ್ಧಿಕಿ ಅಭಿನಯದ ‘ಮಂಟೋ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನವಾಜುದ್ದೀನ್‌ ಅವರು ಸದತ್‌ ಹಸನ್‌ ಮಂಟೋ ಪಾತ್ರದಲ್ಲಿ ನಟಿಸಿದ್ದು, ತಮ್ಮ ಅದ್ಭುತ ಮ್ಯಾನರಿಸಂ ನಟನೆಯ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುವಂತೆ ಮಾಡಿದ್ದಾರೆ.

ಈ ಚಿತ್ರವು ವಿವಾದಾತ್ಮಕ ಲೇಖಕ ಸಾದತ್‌ ಹಸನ್‌ ಮಂಟೋ ಕುರಿತಾಗಿದ್ದು, ಮಂಟೋ ಅವರು ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ಕುರಿತಾದ ಬರಹಗಳಿಂದಲೇ ಪ್ರಸಿದ್ಧರಾಗಿದ್ದವರು. ಈ ಚಿತ್ರದಲ್ಲಿ ಮಂಟೋ ಅವರು ದೇಶವಿಭಜನೆಯ ಸಂದರ್ಭದಲ್ಲಿ ಮುಂಬೈ ಬಿಟ್ಟು ಲಾಹೋರ್‌ಗೆ ಹೋಗುವ ಕತೆ ಹೊಂದಿದೆ. ದೇಶ ವಿಭಜನೆಯ ಕಾಲದ ಕತೆ ಈ ಸಿನಿಮಾದು. ಒಂದು ನಿಮಿಷದ ಟೀಸರ್‌ನಲ್ಲಿ ಮಂಟೋ ಪಾತ್ರದಲ್ಲಿ ನವಾಜುದ್ದೀನ್‌ ಸಿದ್ಧಿಕಿ ಮನಸೆಳೆಯುವ ನಟನೆ ಮಾಡಿದ್ದಾರೆ.

ಈ ಚಿತ್ರದಲ್ಲಿ ಪರೇಶ್‌ ರಾವಲ್‌, ರಿಷಿ ಕಪೂರ್‌, ರಸಿಕಾ ದುಕಾಲ್‌, ತಾಹೀರ್ ರಾಜ್‌ ಭಸೀನ್‌ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ನಂದಿತಾ ದಾಸ್‌ ಅವರು ಚಿತ್ರಕತೆ ಹಾಗೂ ನಿರ್ದೇಶನ ಮಾಡಿದ್ದು, ಕಾನ್ಸ್‌ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry