ಇಬ್ಬರೂ ಹೆಂಡತಿಯರೊಂದಿಗೆ ತಲಾ ಮೂರು ದಿನ ಕಳೆಯಲು ಸೂಚನೆ

7
ಒಂದು ದಿನ ತಾಯಿಗೆ ಮೀಸಲು

ಇಬ್ಬರೂ ಹೆಂಡತಿಯರೊಂದಿಗೆ ತಲಾ ಮೂರು ದಿನ ಕಳೆಯಲು ಸೂಚನೆ

Published:
Updated:

ಪಟ್ನಾ: ಇಬ್ಬರನ್ನು ಮದುವೆಯಾದ ವ್ಯಕ್ತಿಯೊಬ್ಬರಿಗೆ ತಲಾ ಮೂರು ದಿನಗಳ ಕಾಲ ಪತ್ನಿಯರೊಂದಿಗೆ ಕಾಲ ಕಳೆಯುವಂತೆ ಸೂಚನೆ ನೀಡಿದ ಪ್ರಕರಣ ಬಿಹಾರದಲ್ಲಿ ವರದಿಯಾಗಿದೆ. ಉಳಿದ ಒಂದು ದಿನ ವಯೋವೃದ್ಧ ತಾಯಿ ಜೊತೆ ಕಾಲ ಕಳೆಯುವಂತೆ ಸಲಹೆ ನೀಡಲಾಗಿದೆ.

ಈ ರೀತಿ ಹೇಳಿರುವುದು ಯಾವುದೇ ನ್ಯಾಯಾಲಯವಲ್ಲ, ಪೂರ್ನಿಯಾದಲ್ಲಿರುವ ಪೊಲೀಸ್‌–ಕೌಟುಂಬಿಕ ಸಲಹಾಕೇಂದ್ರ ‘ಪೊಲೀಸ್‌ – ಪರಿವಾರ್‌ ಪರಾಮಾರ್ಶ್‌ ಕೇಂದ್ರ’.

ಇಲ್ಲಿನ ಸ್ಥಳೀಯ ನಿವಾಸಿ ರಾಕಿಯಾ ಖಾತೂನ್‌ ಅವರು ಅಬು ಶರ್ಮಾ ಅವರನ್ನು ವಿವಾಹವಾಗಿದ್ದರು. ಇದಾದ ಬಳಿಕ ಮೊದಲ ಪತ್ನಿಗೆ ತಿಳಿಸದೇ ಮತ್ತೊಂದು ವಿವಾಹವಾಗಿ ಆಕೆ ಜೊತೆ ನೆಲೆಸಿದ್ದರು. ‘ಪತಿ ಎರಡನೇ ಮದುವೆಯಾದ ಬಳಿಕ ನನ್ನ ಮೇಲೆ ಹಲ್ಲೆ ನಡೆಸಿದ್ದು, ಸರಿಯಾಗಿ ನೋಡಿಕೊಳ್ಳುತ್ತಿಲ್ಲ’ ಎಂದು ಮೊದಲ ಪತ್ನಿ ದೂರು ಸಲ್ಲಿಸಿದ್ದರು.

ಈ ಸಲಹಾ ಕೇಂದ್ರಕ್ಕೆ ಬಂದ ಕೆಲವೊಂದು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಪ್ರಕರಣವನ್ನು ಮಧ್ಯಸ್ಥಿಕೆಯಲ್ಲಿ ಬಗೆಹರಿಸಿದೆ.

ಪೊಲೀಸ್‌ – ಪರಿವಾರ್‌ ಪರಾಮಾರ್ಶ್‌ ಕೇಂದ್ರ 2006ರಲ್ಲಿ ಆರಂಭಗೊಂಡಿದ್ದು, ಇದುವರೆಗೂ 5 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಸುಖಾಂತ್ಯವಾಗಿ ಬಗೆಹರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry