ರಾಜಸ್ತಾನ ರಾಯಲ್ಸ್‌ಗೆ 169 ರನ್‌ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ ರಾಯಲ್ಸ್ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದ್ದು, ರಾಜಸ್ತಾನ ರಾಯಲ್ಸ್‌ಗೆ 169 ರನ್‌ಗಳ ಗುರಿ ನೀಡಿದೆ
ಟಾಸ್‌ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಜಸ್ತಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಕ್ಕೂ ಈ ಪಂದ್ಯ ಮಾಡು ಇಲ್ಲವೇ ಮಡಿ ಹೋರಾಟ ಎನಿಸಿದೆ.
ಈ ಎರಡು ತಂಡ ಎರಡನೇ ಬಾರಿ ಎದುರಾಗುತ್ತಿದ್ದು, 11 ಅಂಕ ಪಡೆದಿದ್ದು, ಅಂಕಗಳಿಕೆಯಲ್ಲಿ ಸಮಬಲ ಸಾಧಿಸಿವೆ. ಆದ ಕಾರಣ ಈ ಪಂದ್ಯ ಎರಡೂ ತಂಡಗಳಿಗೂ ಸವಾಲಿನದಾಗಿದೆ.
Innings Break.
After being put to bat first, the #MumbaiIndians post a total of 168/6 in 20 overs.
Chase coming up in a bit. #MIvRR #VIVOIPL pic.twitter.com/O2DVnv8sEt
— IndianPremierLeague (@IPL) May 13, 2018
60 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತ ಮುಂಬೈ ಇಂಡಿಯನ್ಸ್ ತಂಡದ ಲೂಯಿಸ್ ಇದೇ ಲೀಗ್ನಲ್ಲಿ ಎರಡನೇ ಅರ್ಧ ಶತಕ ಬಾರಿಸಿದ ಖುಷಿ ಅನುಭವಿಸಿದರು.
ಆರ್ ಆರ್ ತಂಡದ ರಹಣೆ ಮತ್ತು ಬಟ್ಲರ್ ಜತೆಯಾಟ ಮುಂದುವರೆದಿದ್ದು,10 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.