ಲುಂಬಿನಿ ಗಾರ್ಡನ್ಸ್‌: ತೇಲುವ ರೆಸ್ಟೊರೆಂಟ್‌

7

ಲುಂಬಿನಿ ಗಾರ್ಡನ್ಸ್‌: ತೇಲುವ ರೆಸ್ಟೊರೆಂಟ್‌

Published:
Updated:

ಬೆಂಗಳೂರು: ಮನರಂಜನೆಯ ತಾಣವಾಗಿರುವ ‘ಲುಂಬಿನಿ ಗಾರ್ಡನ್ಸ್‌’ನಲ್ಲಿ ಇತ್ತೀಚೆಗೆ ತೇಲುವ ರೆಸ್ಟೊರೆಂಟ್ ಆರಂಭಿಸಲಾಗಿದೆ.

ಔತಣಕೂಟ ಮತ್ತು ಸಂಭ್ರಮಾಚರಣೆಗೆ ಈ ತೇಲುವ ರೆಸ್ಟೊರೆಂಟ್‌ ಹೊಸ ಆಕರ್ಷಣೆಯ ತಾಣವಾಗಿದೆ. ಗಾರ್ಡನ್ಸ್‌ನಲ್ಲಿ ಇರುವ  ಇತರ ಆಹಾರ ಮಳಿಗೆಗಳಲ್ಲಿ ಬಹುರಾಷ್ಟ್ರೀಯ ರೆಸ್ಟೊರೆಂಟ್ಸ್‌ ಮತ್ತು ದೇಶಿ ಬ್ರ್ಯಾಂಡ್‌ನ ಹೋಟೆಲ್‌ಗಳಿವೆ.

ಕುಟುಂಬದ ಸದಸ್ಯರ ಜಿಹ್ವಾ ಚಾಪಲ್ಯ ತಣಿಸುವ ವೈವಿಧ್ಯಮಯ ಆಹಾರ, ತಿಂಡಿ ತಿನಿಸುಗಳು ಇಲ್ಲಿ ಲಭ್ಯ ಇವೆ. ಜಲಕ್ರೀಡೆಗೆ ಸಂಬಂಧಿಸಿದಂತೆ ವೇವ್‌ಪೂಲ್‌, ಕಿಡ್ಸ್‌ಪೂಲ್‌, ಪೆಡಲ್‌ ಬೋಟ್‌, ಕಾಫಿ ಬೋಟ್ಸ್‌, ಕೊಲಂಬಸ್‌, ಕ್ಯಾಟರ್‌ಪಿಲ್ಲರ್‌ ರೈಡ್‌ ಇತರ ಆಕರ್ಷಣೆಗಳಾಗಿವೆ.

ರಂಜನೆ, ಆರಾಮ, ವಿಹಾರದ ‘ಲುಂಬಿನಿ ಗಾರ್ಡನ್ಸ್‌’ ವರ್ಷದ ಎಲ್ಲ ದಿನಗಳಲ್ಲೂ ಇಡೀ ಕುಟುಂಬದ ಮನರಂಜನೆಗೆ ಸೂಕ್ತ ತಾಣವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry