ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ರಿಕ್ಷಾ ಟೈರ್‌ಗೆ ಶೇ 28 ಜಿಎಸ್‌ಟಿ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್‌ ಚಾಲಿತ ರಿಕ್ಷಾದ (ಇ–ರಿಕ್ಷಾ) ಟೈರ್‌ ಶೇ 28 ರಷ್ಟು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ.

ಸಿಯೆಟ್‌ ಲಿಮಿಟೆಡ್‌ ಕಂಪನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಥಾರಿಟಿ ಆಫ್‌ ಅಡ್ವಾನ್ಸ್‌ ರೂಲಿಂಗ್ಸ್‌ನ (ಎಎಆರ್‌) ಮಹಾರಾಷ್ಟ್ರ ಪೀಠವು ಈ ಆದೇಶ ಹೊರಡಿಸಿದೆ.

‘ವಿದ್ಯುತ್‌ ಚಾಲಿತ ತ್ರಿಚಕ್ರ ಸೈಕಲ್ ರಿಕ್ಷಾಗಳಿಗೆ ಶೇ 5 ರಷ್ಟು ಜಿಎಸ್‌ಟಿ ಇದೆ. ಹೀಗಾಗಿ ಇ–ರಿಕ್ಷಾ ಸಹ ಅದರ ವ್ಯಾಪ್ತಿಗೆ ಬರುತ್ತದೆಯೇ ಎಂದು ಕಂಪನಿಯು ಸ್ಪಷ್ಟನೆ ಕೇಳಿತ್ತು. ಆದರೆ, ಮೋಟರ್‌ ವೆಹಿಕಲ್ ಕಾಯ್ದೆಯ ಅನ್ವಯ ಇ–ರಿಕ್ಷಾ  ‘ಮೋಟರ್‌ ವೆಹಿಕಲ್ಸ್‌’ ವ್ಯಾಪ್ತಿಗೆ ಬರಲಿದ್ದು, ಟೈರ್‌ಗೆ ಶೇ 28 ರಷ್ಟು ಜಿಎಸ್‌ಟಿ
ತೆರಬೇಕಾಗುತ್ತದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT