ಹಾಕಿ ಉತ್ಸವ: ನೆಲ್ಲಮಕ್ಕಡ ತಂಡಕ್ಕೆ ಜಯ

7

ಹಾಕಿ ಉತ್ಸವ: ನೆಲ್ಲಮಕ್ಕಡ ತಂಡಕ್ಕೆ ಜಯ

Published:
Updated:

ಮಡಿಕೇರಿ: ನೆಲ್ಲಮಕ್ಕಡ ತಂಡವು, ನಾಪೋಕ್ಲು ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಕಂಬೀರಂಡ ತಂಡವನ್ನು 2–0 ಅಂತರದಲ್ಲಿ ಮಣಿಸಿತು.

ಪಂದ್ಯದ ಆರಂಭದಿಂದಲೂ ನೆಲ್ಲ ಮಕ್ಕಡ ಆಟಗಾರರು ಬಿರುಸಿನ ಆಟಕ್ಕೆ ಮುಂದಾದರು. ಈ ತಂಡದ ಪರ ನಾಣಯ್ಯ 1, ಮೊಣ್ಣಪ್ಪ 1 ಗೋಲು ಗಳಿಸಿದರು.

ಅಂಜಪರುವಂಡ ತಂಡವು ಕಡೇಮಾಡ ತಂಡವನ್ನು 2–0 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿತು.

ಅಂಜಪರುವಂಡದ ಪರ ಅಭಿನ್ ಚೆಟ್ಟಿಯಪ್ಪ, ಹೇಮಂತ್ ದೇವಯ್ಯ ಒಂದೊಂದು ಗೋಲು ಗಳಿಸಿದರು. ಟೈಬ್ರೇಕರ್‌ನಲ್ಲಿ ಮುಳುವಂಡ ತಂಡವು ಅರೆಯಂಡವನ್ನು ಮಣಿಸಿತು.

ಕಳ್ಳೆಂಗಡದ ವಿರುದ್ಧ ಮಾಜಿ ಚಾಂಪಿಯನ್‌ ಪಳಂಗಂಡ ತಂಡವು 3–1 ಅಂತರದಲ್ಲಿ ಗೆಲುವು ಸಾಧಿಸಿತು. ಪಳಂಗಂಡದ ಪರ ಕಾಳಪ್ಪ, ಪ್ರಸೀಲ್, ಪ್ರಜ್ವಲ್ ಗೋಲು ಗಳಿಸಿದರು. ಕಳ್ಳೆಂಗಡ ಪರ ಸುಜನ್ 1 ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ಬಿದ್ದಾಟಂಡದ ವಿರುದ್ಧ ಕೊಂಗಂಡವು 2–1ರಿಂದ ಗೆದ್ದಿತು. ಚಕ್ಕೇರ ತಂಡವು ಕೆಲೇಟಿರ ತಂಡವನ್ನು 4–1 ಅಂತರದಲ್ಲಿ ಸೋಲಿಸಿತು. ಚಕ್ಕೇರ ಪರ ಬೆಳ್ಯಪ್ಪ ‘ಹ್ಯಾಟ್ರಿಕ್‌’ ಗೋಲು ಹೊಡೆ ದರೆ, ಕೆಲೇಟಿರ ಪರ ಆದರ್ಶ್‌ ಒಂದು ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry