ಇಂದಿರಾ ಕ್ಯಾಂಟಿನ್‌ಗೆ ಕಲ್ಲು

ಬೆಂಗಳೂರು: ನಗರದ ಅತ್ತಿಗುಪ್ಪೆಯ ಬಿಬಿಎಂಪಿ ವಾರ್ಡ್ ಸಂಖ್ಯೆ 132ರಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಿ ಪರಾರಿಯಾಗಿರುವ ಪ್ರಕರಣ ಭಾನುವಾರ ನಡೆದಿದೆ.
‘ಕಲ್ಲು ಸಂಗ್ರಹಿಸಿಕೊಂಡು ಬಂದಿದ್ದ ಅಪರಿಚಿತರು ಕಾರಿನೊಳಗೆ ಕುಳಿತುಕೊಂಡೇ ಕ್ಯಾಂಟಿನ್‌ನತ್ತ ಕಲ್ಲು ಬೀಸಿದ್ದಾರೆ. ಕಲ್ಲಿನ ಏಟಿಗೆ ಕ್ಯಾಂಟಿನ್‌ನ ಕಿಟಕಿಯ ಗಾಜು ಪುಡಿಯಾಗಿದೆ. ಈ ಸಂದರ್ಭದಲ್ಲಿ ಕ್ಯಾಂಟಿನ್ ಸಿಬ್ಬಂದಿ ಒಳಗೆ ಇದ್ದರು. ಆದರೆ, ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ‘ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕಾರಿನೊಳಗೆ ನಾಲ್ಕರಿಂದ ಐದು ಜನ ಕುಳಿತುಕೊಂಡಿದ್ದನ್ನು ಸಿಬ್ಬಂದಿ ನೋಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ‘ ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕ್ಯಾಂಟಿನ್ ಮತ್ತು ಅಡುಗೆ ಕೆಲಸ ಮಾಡುವವರಿಗೆ ಶನಿವಾರ ರಜೆ ನೀಡಿದ್ದರಿಂದ ಭಾನುವಾರವಷ್ಟೇ ಕ್ಯಾಂಟಿನ್ ಆರಂಭವಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.