‘ಕ್ರಿಯಾಶೀಲ ರಾಜಕಾರಣಿಗಳ ಅಗತ್ಯವಿದೆ’

7

‘ಕ್ರಿಯಾಶೀಲ ರಾಜಕಾರಣಿಗಳ ಅಗತ್ಯವಿದೆ’

Published:
Updated:
‘ಕ್ರಿಯಾಶೀಲ ರಾಜಕಾರಣಿಗಳ ಅಗತ್ಯವಿದೆ’

ಬೆಂಗಳೂರು: ‘ಬಿ.ಎನ್‌.ವಿಜಯಕುಮಾರ್‌ ಅವರಂತಹ ಕ್ರಿಯಾಶೀಲ ಹಾಗೂ ಪ್ರಾಮಾಣಿಕ ರಾಜಕಾರಣಿಗಳ ಅಗತ್ಯವಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಅಭಿಪ್ರಾಯಪಟ್ಟರು.

ವಿಜಯಕುಮಾರ್ ಅವರ ನೆನಪಿನಾರ್ಥ ಅದಮ್ಯ ಚೇತನ ಸಂಸ್ಥೆ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಜಯಕುಮಾರ್ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಕೆಂಪೇಗೌಡರ ಹಾದಿಯನ್ನು ಅನುಸರಿಸಿದ್ದ ಅವರು ಬೆಂಗಳೂರಿನ ಭವಿಷ್ಯದ ಕುರಿತು ಸಾಕಷ್ಟು ಕನಸು ಕಂಡಿದ್ದರು. ಶುದ್ಧ ಗಾಳಿ, ನೀರು ಸಿಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದರು’ ಎಂದರು.

‘ಮತದಾನ ಪ್ರಜಾಪ್ರಭುತ್ವದ ಬುನಾದಿ. ಆದರೆ ಬೆಂಗಳೂರಿನ ಜನರು ಮತದಾನ ಪ್ರಕ್ರಿಯೆಯಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry