ಗಣ್ಯರು, ರಾಜಕಾರಣಿಗಳ ಮೇಲೆ ದಾಳಿಗೆ ಸಂಚು: ಶಂಕಿತ ಉಗ್ರನ ಬಂಧನ

7

ಗಣ್ಯರು, ರಾಜಕಾರಣಿಗಳ ಮೇಲೆ ದಾಳಿಗೆ ಸಂಚು: ಶಂಕಿತ ಉಗ್ರನ ಬಂಧನ

Published:
Updated:
ಗಣ್ಯರು, ರಾಜಕಾರಣಿಗಳ ಮೇಲೆ ದಾಳಿಗೆ ಸಂಚು: ಶಂಕಿತ ಉಗ್ರನ ಬಂಧನ

ಮುಂಬೈ: ಗಣ್ಯ ವ್ಯಕ್ತಿಗಳು, ಸಿನಿಮಾ ತಾರೆಯರು, ಪ್ರಮುಖ ರಾಜಕಾರಣಿಗಳು ಮತ್ತು ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಶಂಕಿತ ಉಗ್ರನೊಬ್ಬನನ್ನು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಫೈಸಲ್ ಹಸನ್ ಮಿರ್ಜಾ ವಾಯವ್ಯ ಮುಂಬೈನ ಜೋಗೇಶ್ವರಿ ನಿವಾಸಿಯಾಗಿದ್ದು, ಎಲೆಕ್ಟ್ರಿಷಿಯನ್ ಆಗಿದ್ದಾನೆ. ಈತನಿಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್–ಇ–ತೊಯ್ಬಾ (ಎಲ್‌ಇಟಿ) ಜತೆ ಸಂಪರ್ಕ ಇದೆ ಎನ್ನಲಾಗಿದೆ. ಕೋಲ್ಕತ್ತ ಪೊಲೀಸ್ ವಿಶೇಷ ಕಾರ್ಯಪಡೆ ನೀಡಿದ ಸುಳಿವಿನ ಆಧಾರದಲ್ಲಿ ಫೈಸಲ್‌ನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫೈಸಲ್‌ ಈ ಹಿಂದೆ ಶಾರ್ಜಾ ಮತ್ತು ದುಬೈಗೆ ತೆರಳಿದ್ದ ವೇಳೆ ಎಲ್‌ಇಟಿ ಜತೆಗಿನ ಆತನ ನಂಟು ಗಟ್ಟಿಯಾಗಿತ್ತು. ನಂತರ ಇಂಡಿಯನ್ ಮುಜಾಹಿದ್ದೀನ್ ಉಗ್ರರ ಜತೆಗೂ ಆತ ಸಂಪರ್ಕ ಇರಿಸಿಕೊಂಡಿದ್ದ ಎಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry