ಪಾವಗಡ ತಾಲ್ಲೂಕಿನಲ್ಲಿ ಮಕ್ಕಳ ಕಳ್ಳರ ಭೀತಿ

7

ಪಾವಗಡ ತಾಲ್ಲೂಕಿನಲ್ಲಿ ಮಕ್ಕಳ ಕಳ್ಳರ ಭೀತಿ

Published:
Updated:
ಪಾವಗಡ ತಾಲ್ಲೂಕಿನಲ್ಲಿ ಮಕ್ಕಳ ಕಳ್ಳರ ಭೀತಿ

ಪಾವಗಡ: ಮಕ್ಕಳನ್ನು ಅಪಹರಿಸಿ ಕಿಡ್ನಿ ಸೇರಿದಂತೆ ಅಂಗಾಗ ಕದಿಯುತ್ತಾರೆ ಎಂಬ ವಾಟ್ಸ್ ಆ್ಯಪ್ ಸಂದೇಶ ತಾಲ್ಲೂಕಿನ ದೊಡ್ಡಹಳ್ಳಿ, ಪೊನ್ನಸಮುದ್ರದಲ್ಲಿ ಜನರಲ್ಲಿ ಭೀತಿ ಸೃಷ್ಟಿಸಿದೆ.

ಆಂಧ್ರಪ್ರದೇಶದಿಂದ ಮಕ್ಕಳ ಕಳ್ಳರು ಬರುತ್ತಾರೆ. ರಾತ್ರಿ ಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂಬ ವಾಟ್ಸ್ಅ್ಯಪ್ ಸಂದೇಶವೇ ಈ ಭೀತಿಗೆ ಕಾರಣವಾಗಿದೆ.

ಕಾಕತಾಳೀಯ ಎಂಬಂತೆ ಭಾನುವಾರ ರಾತ್ರಿ ದೊಡ್ಡಹಳ್ಳಿಯಲ್ಲಿ ಯುವತಿ ನಾಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ.

ಆದರೆ, ಪೊಲೀಸರು ಇಂತಹ ಪ್ರಕರಣ ನಡೆದಿಲ್ಲ. ಬರೀ ಉಹಾಪೋಹ. ಗ್ರಾಮಸ್ಥರಲ್ಲಿನ ಭೀತಿ ಹೋಗಲಾಡಿಸಲಾಗುವುದು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry