ಮಾವು ಪ್ರದರ್ಶನ, ಮಾರಾಟ ಮೇಳ ಮೇ 16 ರಂದು

7

ಮಾವು ಪ್ರದರ್ಶನ, ಮಾರಾಟ ಮೇಳ ಮೇ 16 ರಂದು

Published:
Updated:

ಬಾಗಲಕೋಟೆ: ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮೇ 16 ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.

ಬೆಳೆಗಾರರಿಂದ ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಗ್ರಾಹಕರಿಗೆ ಉತ್ತಮ ತಳಿಯ ಮತ್ತು ಗುಣಮಟ್ಟದ ನೈಸರ್ಗಿಕ ಹಣ್ಣುಗಳನ್ನು ಒದಗಿಸುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಜಿಲ್ಲೆಯ ಮಾವು ಬೆಳೆಗಾರರು ಹಾಗೂ ನೆರೆಹೊರೆಯ ಜಿಲ್ಲೆಯ ಮಾವು ಬೆಳೆಗಾರರು, ರೈತರು ಮತ್ತು ಗ್ರಾಹಕರು ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ರೈತರು ಮೇ 15 ರಂದು ಸಂಜೆ 5 ಗಂಟೆಯೊಳಗಾಗಿ ಆಯಾ ತಾಲ್ಲೂಕು ಸಹಾಯಕ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಬಾದಾಮಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಗಯ್ಯ ಹಿರೇಮಠ ಮೊ.ಸಂಖ್ಯೆ: 89510–88486, ಬಾಗಲಕೋಟೆ ತಾಲ್ಲೂಕಿನ ಮಹಾಂತೇಶ ಹಂಚಿನಾಳ 97424–25773, ಮುಧೋಳ ತಾಲ್ಲೂಕಿನ ಶಶಿಕಾಂತ ಮೋಹಿತೆ 94497–78010, ಜಮಖಂಡಿ ತಾಲ್ಲೂಕಿನ ಮೆಹಬೂಬ್ ಧನ್ನೂರ 99458–56097, ಹುನಗುಂದ ತಾಲ್ಲೂಕಿನ ರತ್ನಾ ಗಾಣಿಗೇರ 99005–14566 ಹಾಗೂ ಬೀಳಗಿ ತಾಲ್ಲೂಕಿನ ಮಹಾಂತೇಶ ಅಚಿಟಿನ 97393–84476ಗೆ ಸಂಪರ್ಕಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry