28.29 ಲಕ್ಷ ಮಂದಿ ಮತದಾನ

7
ಪರಿಷ್ಕೃತ ಅಂಕಿ ಅಂಶ ಪ್ರಕಟ

28.29 ಲಕ್ಷ ಮಂದಿ ಮತದಾನ

Published:
Updated:
28.29 ಲಕ್ಷ ಮಂದಿ ಮತದಾನ

ಬೆಳಗಾವಿ: ಜಿಲ್ಲೆಯ ಎಲ್ಲ 18  ಕ್ಷೇತ್ರಗಳಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಗೊಂಡ ಮತಗಳ ‍‍ಪರಿಷ್ಕೃತ ಅಂಕಿ ಅಂಶಗಳ ವಿವರ ಲಭ್ಯವಾಗಿದ್ದು, ಒಟ್ಟಾರೆ ಶೇ 75.99ರಷ್ಟು ಮತದಾನವಾಗಿದೆ. ಈ ಮೊದಲು ಶೇ 76.18ರಷ್ಟು ಮತದಾನವಾಗಿತ್ತೆಂದು ಅಂದಾಜಿಸಲಾಗಿತ್ತು. ಅಂತಿಮ ವಿವರಗಳು ಪ್ರಕಟಗೊಂಡಾಗ ಶೇ 0.19ರಷ್ಟು ಕಡಿಮೆಯಾಗಿದೆ. 2013ರಲ್ಲಿ ಶೇ 74.92ರಷ್ಟು ಮತದಾನವಾಗಿತ್ತು. ಅದಕ್ಕೆ ಹೋಲಿಸಿದರೆ ಶೇ 1.07ರಷ್ಟು ಹೆಚ್ಚಳವಾಗಿದೆ.

ಜಿಲ್ಲೆಯ ಒಟ್ಟು 37,37,887 ಪೈಕಿ 28,29,490 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 18,88,415 ಪೈಕಿ 14,65,111 ಪುರುಷರು (ಶೇ 77.58) ಹಾಗೂ 18,34,894 ಪೈಕಿ 13,64,372 ಮಹಿಳೆಯರು (ಶೇ 74.36) ಮತ ಚಲಾಯಿಸಿದ್ದಾರೆ.

ತೃತೀಯ ಲಿಂಗಿಗಳು: ಜಿಲ್ಲೆಯಲ್ಲಿ ಒಟ್ಟು 276 ತೃತೀಯ ಲಿಂಗಿಗಳು ಮತದಾರರ ಚೀಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಕುಡಚಿ– 2, ರಾಯಬಾಗ– 1, ಗೋಕಾಕ– 1, ಬೆಳಗಾವಿ ದಕ್ಷಿಣ– 1, ಕಿತ್ತೂರು– 1, ಬೈಲಹೊಂಗಲ– 1 ಸೇರಿದಂತೆ ಒಟ್ಟು ಏಳು ಸದಸ್ಯರು ಮತ ಚಲಾಯಿಸಿದ್ದಾರೆ.

ಚಿಕ್ಕೋಡಿ ಹೆಚ್ಚು: ಚಿಕ್ಕೋಡಿ– ಸದಲಗಾ ಕ್ಷೇತ್ರದಲ್ಲಿ ಶೇ 84.78ರಷ್ಟು ಮತ ಚಲಾವಣೆಯಾಗಿದ್ದು, ಜಿಲ್ಲೆಯಲ್ಲಿಯೇ ಅತಿ ಹೆಚ್ಚಾಗಿದೆ. ಅತಿ ಕಡಿಮೆ (ಶೇ 62.50) ಬೆಳಗಾವಿ ದಕ್ಷಿಣದಲ್ಲಿ ಆಗಿದೆ.

ಮೂರು ಕ್ಷೇತ್ರಗಳಲ್ಲಿ ಶೇ 80ಕ್ಕಿಂತ ಹೆಚ್ಚು ಮತದಾನ ಆಗಿದೆ. ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಶೇ 84.78, ನಿಪ್ಪಾಣಿ

ಯಲ್ಲಿ ಶೇ 81.19 ಹಾಗೂ ಹುಕ್ಕೇರಿಯಲ್ಲಿ ಶೇ 81.15ರಷ್ಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry