ಗುರುವಾರ , ಮಾರ್ಚ್ 4, 2021
29 °C

ಮತದಾನ ಮಾಡದ ನಟಿ ರಮ್ಯಾ, ಪ್ರಕಾಶ್‌ ರೈ: ಟ್ವಿಟರ್‌ನಲ್ಲಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾನ ಮಾಡದ ನಟಿ ರಮ್ಯಾ, ಪ್ರಕಾಶ್‌ ರೈ: ಟ್ವಿಟರ್‌ನಲ್ಲಿ ಟೀಕೆ

ಬೆಂಗಳೂರು: ‘ಮತದಾನ ನಮ್ಮ ಹಕ್ಕು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಿದ್ದ ನಟಿ ರಮ್ಯಾ ಹಾಗೂ ‘ಜಸ್ಟ್‌ ಅಸ್ಕಿಂಗ್‌’ (#justasking) ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದ ನಟ ಪ್ರಕಾಶ್‌ ರೈ ಅವರು ಮೇ 12ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದ ಕಾರಣಕ್ಕೆ ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರಿಗೆ 420 ಕ್ರಮ ಸಂಖ್ಯೆ ಸಿಕ್ಕಿದ್ದು, ನಗರದ 10ನೇ ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಅವರ ಹೆಸರಿತ್ತು.

ವಿದ್ಯಾನಗರದ ಪಿಎಲ್‌ಡಿ ಬ್ಯಾಂಕ್‌ ಮತಗಟ್ಟೆಯಲ್ಲಿ ರಮ್ಯಾ ಮತ ಚಲಾವಣೆ ಮಾಡಬೇಕಿತ್ತು. ಸದ್ಯ ದೆಹಲಿಯಲ್ಲಿ ವಾಸವಾಗಿರುವ ಅವರು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿದ್ಯಾನಗರದ ಬಾಡಿಗೆ ಮನೆಯಲ್ಲಿ ಇದ್ದರು.

ನಟಿ ರಮ್ಯಾ ಹಾಗೂ ಪ್ರಕಾಶ್‌ ರೈ ಅವರನ್ನು ಟೀಕಿಸಿರುವ ಸರಣಿ ಟ್ವೀಟ್‌ಗಳು ಇಗಿದ್ದು, ನಾಟ್‌ ವೋಟೆಡ್‌ (#NotVoted) ಹ್ಯಾಷ್‌ ಟ್ಯಾಗ್‌ ವೈರಲ್‌ ಆಗಿದೆ. 

*

*

*

*

*

*

*

*

*

*

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.