ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಾರಿಗೆಗೆ ನಿಲ್ದಾಣವೇ ಇಲ್ಲ

ಸ್ವಚ್ಛತೆ ಇಲ್ಲದ ಸ್ಥಳದಲ್ಲಿ ನಿಲ್ಲಲ್ಲು ಪ್ರಯಾಣಿಕರಿಗೆ ಕಿರಿಕಿರಿ
Last Updated 14 ಮೇ 2018, 8:45 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಇಲ್ಲಿ ಕೂರಲು ಜಾಗವಿಲ್ಲ. ನಿಂತುಕೊಂಡೇ ಸಿಟಿ ಬಸ್‌ಗಾಗಿ ಕಾಯಬೇಕು. ವಾಸನೆ ಹೊಡೆಯುತ್ತಿರುತ್ತದೆ. ಸ್ಮಾರ್ಟ್‌ಸಿಟಿ ಎಂಬ ಕೋಡು ಮಾತ್ರ ಇದೆ’

ಇದು ನಗರ ಸಾರಿಗೆ ಬಸ್‌ಗೆ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ಮತ್ತೊಬ್ಬ ಪ್ರಯಾಣಿಕರ ಬಳಿ ಅಲ್ಲಿನ ಸಮಸ್ಯೆಗಳನ್ನು ಬಿಚ್ಚಿಡುತ್ತಿದ್ದ ಪರಿ. ಈ ಮಾತುಗಳಲ್ಲೇ ಸಮಸ್ಯೆಯ ಪೂರ್ಣ ಚಿತ್ರಣ ಇದೆ. ನಗರದಲ್ಲಿ ಸಂಚರಿಸಲು ಅನೇಕ ಖಾಸಗಿ ಹಾಗೂ ಸರ್ಕಾರಿ ನಗರ ಸಾರಿಗೆ ವಾಹನಗಳಿಿದ್ದರೂ ನಗರದ ಹೃದಯ ಭಾಗ ಅಶೋಕ ವೃತ್ತದ ಬಳಿ ಪ್ರಯಾಣಿಕರು ಕಾಯಲು ಬಸ್‌ ನಿಲ್ದಾಣವೇ ಇಲ್ಲ.

ಹಿಂದೆ ಒಂದು ನಿಲ್ದಾಣವಿತ್ತು. ಪ್ರಯಾಣಿಕರು ಹೊಂದಾಣಿಕೆ ಮಾಡಿಕೊಂಡು ಕುಳಿತು ಬಸ್‌ಗಾಗಿ ಕಾಯುತ್ತಿದ್ದರು. ಈಗ ಅದನ್ನು ಒಡೆದು ಹಾಕಲಾಗಿದೆ. ಹಾಗಾಗಿ ನಿಲ್ಲಲು ಸ್ಥಳವಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಪ್ರಯಾಣಿಕರಿಗೆ ಅನುಕೂಲಕರ ಸ್ಥಳ: ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳ ಎದುರಿನಲ್ಲೇ ನಗರ ಸಾರಿಗೆ ಬಸ್‌ ಬರುವುದರಿಂದ ಪ್ರಯಾಣಿಕರಿಗೆ ನಗರದಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ನಗರ ಸಾರಿಗೆ ಬಸ್‌ಗಳಿಂದ ಅನುಕೂಲವಾಗಿದೆ. ಹಾಗಾಗಿ ಪ್ರಯಾಣಿಕರು ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ.

ಖಾಸಗಿ ಬಸ್‌ ನಿಲ್ದಾಣ: ಕೆಲವು ವರ್ಷಗಳ ಹಿಂದೆ ಈ ಸ್ಥಳವೇ ಖಾಸಗಿ ಬಸ್‌ನಿಲ್ದಾಣವಾಗಿತ್ತು. ಖಾಸಗಿ ಬಸ್‌ಗಳ ಜತೆಗೆ ನಗರ ಸಾರಿಗೆ ಬಸ್‌ಗಳು ಅಲ್ಲಿಯೇ ಬರುತ್ತಿದ್ದವು. ಪ್ರಯಾಣಿಕರು ಆಗ ಸ್ವಚ್ಛತೆ ಇಲ್ಲಿದೇ ಇದ್ದರೂ ಸಹಿಸಿಕೊಂಡಿದ್ದರು. ನಂತರ ನೂತನ ಖಾಸಗಿ ಬಸ್‌ನಿಲ್ದಾಣ ನಿರ್ಮಿಸಲಾಯಿತು. ಈಗ ಅದೇ ಸ್ಥಳ ನಗರ ಸಾರಿಗೆಯ ಬಸ್‌ನಿಲ್ದಾಣವಾಗಿ ಮಾರ್ಪಟ್ಟಿದೆ.

ಮರೀಚಿಕೆಯಾದ ಸ್ವಚ್ಛತೆ : ಸ್ವಚ್ಛತೆಯೇ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಪ್ರಯಾಣಿಕರು ಅಲ್ಲಿನ ಪುಟ್ಟ ಅಂಗಡಿಗಳ ಪಕ್ಕದಲ್ಲಿ ನಿಂತುಕೊಳ್ಳುತ್ತಾರೆ. ಹಿಂದೆಯೇ ಕಸದ ರಾಶಿ ಬಿದ್ದಿದೆ. ಅಲ್ಲಿಂದ ದುರ್ವಾಸನೆ ಹೊಡೆಯುತ್ತಿದೆ. ಇದರಿಂದ ಮಹಿಳೆಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಕಿರಿಕಿರಿ ಅನುಭವಿಸುತ್ತಾರೆ. ಪಕ್ಕದಲ್ಲಿ ಪ್ರವಾಸಿಗರ ಕಾರು ನಿಲ್ದಾಣವಿದೆ. ಅದರ ಹಿಂಭಾಗ ಗುಂಡಿ ಅಗೆದಿರುವುದರಿಂದ ಅದೂ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಸಾವಿರಾರು ಜನ ಇಲ್ಲಿ ಆಚೀಚೆ ಹೋಗುತ್ತಿರುತ್ತಾರೆ. ಇಲ್ಲಿಯೇ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿ ರುವುದರಿಂದ ಅಸಹ್ಯ ಹುಟ್ಟಿಸುತ್ತಿದೆ.

ವಯಸ್ಸಾ ದವರು ಇಲ್ಲಿ ನಿಲ್ಲಲು ಕಷ್ಟ ಪಡುತ್ತಾರೆ. ಮಳೆ ಬಂದರೆ ನಿಲ್ಲಲು ಎಲ್ಲೂ ಜಾಗವಿಲ್ಲ. ತಂಗುದಾಣ
ಅಥವಾ ಸಾರಿಗೆ ಬಸ್‌ನಿಲ್ದಾಣ ನಿರ್ಮಿ ಸಿದರೆ ಉತ್ತಮ ಎನ್ನುತ್ತಾರೆ ಪ್ರಯಾಣಿಕ ಅಮಾನುಲ್ಲ.

‘ಹಳೆಯ ನಿಲ್ದಾಣವನ್ನು ಒಡೆದು, ಗುಂಡಿ ತೋಡಲಾಗಿದೆ. ಪಾಲಿಕೆ ಸಿಬ್ಬಂದಿ ಹೊಸ ನಿಲ್ದಾಣ ನಿರ್ಮಿಸುವುದಾಗಿ ಹೇಳಿ ತಿಂಗಳುಗಳೇ ಕಳೆದರೂ ಇನ್ನೂ ನಿಲ್ದಾಣ ನಿರ್ಮಾಣವಾಗಿಲ್ಲ. ಪ್ರಯಾಣಿಕರು ಇಲ್ಲಿ ನಿಂತು ಕಾಯಲು ಕಷ್ಟ ಪಡುತ್ತಾರೆ ಎನ್ನುತ್ತಾರೆ ಕಾರು ಚಾಲಕ ನಾಗರಾಜ್.

‘ಗುಂಡಿಗಳಿಂದ ತುಂಬಿರುವ ಇಂತಹ ರಸ್ತೆಗಳಲ್ಲಿ ಮಳೆಗಾಲದಲ್ಲಿ ಸಂಚರಿಸಲು ಸಾಧ್ಯವಿಲ್ಲ. ಪ್ರತಿದಿನ ಇಲ್ಲಿ ನಿಲ್ಲು
ವುದು ಕಷ್ಟವಾಗುತ್ತಿದ್ದು, ಶೀಘ್ರದಲ್ಲಿ ಬಸ್‌ನಿಲ್ದಾಣ ನಿರ್ಮಿಸಬೇಕು ಎಂಬುದು ವಿದ್ಯಾರ್ಥಿನಿ ಚೈತ್ರಾ ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT