ಶ್ರೀರಾಮುಲು, ಸುರೇಶಬಾಬು ಉಮೇದುವಾರಿಕೆ ರದ್ದುಪಡಿಸಬೇಕು: ಎಸ್.ಆರ್. ಹಿರೇಮಠ ಆಗ್ರಹ

7

ಶ್ರೀರಾಮುಲು, ಸುರೇಶಬಾಬು ಉಮೇದುವಾರಿಕೆ ರದ್ದುಪಡಿಸಬೇಕು: ಎಸ್.ಆರ್. ಹಿರೇಮಠ ಆಗ್ರಹ

Published:
Updated:
ಶ್ರೀರಾಮುಲು, ಸುರೇಶಬಾಬು ಉಮೇದುವಾರಿಕೆ ರದ್ದುಪಡಿಸಬೇಕು: ಎಸ್.ಆರ್. ಹಿರೇಮಠ ಆಗ್ರಹ

ಹುಬ್ಬಳ್ಳಿ: ‌ಗಾಲಿ ಜನಾರ್ದನರೆಡ್ಡಿ ಬಿಡುಗಡೆಗೆ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರಿಗೆ ಲಂಚದ ಆಮಿಷ ಒಡ್ಡಿದ ಬಿ.ಶ್ರೀರಾಮುಲು ಹಾಗೂ ಟಿ.ಎಚ್.ಸುರೇಶಬಾಬು ಉಮೇದುವಾರಿಕೆ ರದ್ದುಪಡಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ‌ ಅಧ್ಯಕ್ಷ ಎಸ್.ಆರ್. ಹಿರೇಮಠ ಅವರು ಚುನಾವಣಾ ‌ಆಯೋಗವನ್ನು ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಬ್ಬರ ವಿರುದ್ಧವೂ‌ ಗಂಭೀರ ಸ್ವರೂಪದ ಪ್ರಕರಣಗಳಿವೆ. ಇವರು ಮುಖ್ಯ ನ್ಯಾಯಮೂರ್ತಿ ಅವರಿಗೆ ₹ 160 ಕೋಟಿ ಹಣದ ಆಮಿಷ ‌ನೀಡಲು‌ ಮುಂದಾಗಿದ್ದರು. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಇವರ ವಿರುದ್ಧ ‌ಪ್ರಬಲ ಜನಾಂದೋಲನ ಬೆಳೆಯಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry