ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಹೆಚ್ಚಿಸುವ ವೃಕ್ಷಗಳು

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಗುಲ್‌ಮೊಹರ್

ಬಹುತೇಕರು ಈ ಮರವನ್ನು ನೋಡಿದ್ದರೂ, ಇದರ ಹೆಸರು ಗೊತ್ತಿರುವುದಿಲ್ಲ. ಈ ಮರದ ಬಗ್ಗೆ ಬೈಬಲ್‌ನಲ್ಲಿ ಉಲ್ಲೇಖಿಸಲಾಗಿದೆ. ಯೇಸು ಕ್ರಿಸ್ತರನ್ನು ಈ ಮರದ ಪಕ್ಕದಲ್ಲೇ ಶಿಲುಬೆಗೆ ಏರಿಸಲಾಯಿತು ಎಂಬ ಕಥೆಯೂ ಇದೆ.

ಏಸುವಿನ ರಕ್ತ ಈ ಮರದ ಹೂಗಳ ಮೇಲೆ ಬಿದ್ದಿರುವುದರಿಂದಲೇ ಇದರ ಹೂಗಳಿಗೆ ಪ್ರಜ್ವಲಿಸುತ್ತಿರುವ ಬೆಂಕಿಯಂತಹ ಬಣ್ಣ ಬಂದಿದೆ ಎಂದು ಹೇಳಲಾಗಿದೆ. ಇದರ ಎಲೆಗಳು, ಕಾಂಡ ಮತ್ತು  ಹೂವುಗಳಿಗೆ ಬ್ಯಾಕ್ಟಿರಿ ಯಗಳನ್ನು ತಡೆಯುವ ಶಕ್ತಿ ಇದೆ. ಇವನ್ನು ಕೀಲು ನೋವು, ಮಲಬದ್ಧತೆ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.

**

ಹೊಂಗೆ ಮರ (ಇಂಡಿಯನ್ ಬೀಚ್)

ಉಷ್ಣವಲಯದಲ್ಲಿ ಹೆಚ್ಚಾಗಿರುವ ಈ ಮರದ ವೈಜ್ಞಾನಿಕ ಹೆಸರು ಮಿಲ್ಲೇಷಿಯಾ ಪೀನಟ್‌. ಹೆಚ್ಚು ನೆರಳು ನೀಡುತ್ತದೆ. ಹೊಂಗೆ ಬೀಜಗಳ ಎಣ್ಣೆಯನ್ನು ಕ್ರಿಮಿನಾಶಕವಾಗಿಯೂ, ಔಷಧಿಗಾಗಿಯೂ ಹಾಗೂ ಇಂಧನವಾಗಿಯೂ ಬಳಸಿಕೊಳ್ಳಬಹುದು. ಬೀಜಗಳು ವಿಷಪೂರಿತವಾಗಿರುತ್ತವೆ. ನೀರಿದ್ದಲ್ಲಿ 6 ಮೀಟರ್‌ಗಳಷ್ಟು ಎತ್ತರಕ್ಕೂ ಬೆಳೆಯುತ್ತವೆ.

**

ಇಂಡಿಯನ್‌ ಮಹಾಗನಿ

ಭಾರತ, ಬಾಂಗ್ಲಾದೇಶ, ವಿಯಟ್ನಾಂ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಇದನ್ನು ಕಾಣಬಹುದು. ಆಯುರ್ವೇದದಲ್ಲಿ ಈ ವೃಕ್ಷದ ಉಪಯೋಗಗಳ ಬಗ್ಗೆ ತಿಳಿಸಲಾಗಿದೆ. ಇದರ ಕಾಂಡಕ್ಕೆ ಹೆಚ್ಚು ಬೇಡಿಕೆ ಇದೆ.

ಮರಗೆಲಸಕ್ಕೆ ಹೆಚ್ಚು ಬಳಸಲಾಗುತ್ತದೆ. ಇದರ ಎಲೆ, ಹೂಗಳಲ್ಲಿ ಫಂಗಲ್ ನಿರೋಧಕ, ಬ್ಯಾಕ್ಟಿರಿಯಾ ನಿರೋಧಕ ಗುಣಗಳಿವೆ. ಇದರ ತೊಗಟೆಯನ್ನು ಉದರ ಸಂಬಂಧಿ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.

**

ಅಲ್‌ಸ್ಟೋನಿಯಾ

ಈ ಮರದ 60 ಪ್ರಭೇದಗಳನ್ನು ಗುರುತಿಸಲಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಬೆಳೆಯಲಾಗುತ್ತದೆ. ಕೆಲವು ಪ್ರಭೇದಗಳು ಔಷಧಿ ಗುಣಗಳನ್ನು ಒಳಗೊಂಡಿವೆ. ಅಲ್‌ಸ್ಟೊನಿಯಾ ಸ್ಕಾಲರಿಸ್‌ ಕಾಂಡವನ್ನು ಕರಳು ಸಂಬಂಧಿತ ಸಮಸ್ಯೆಗಳಿಗೆ, ಜ್ವರ ಸೇರಿದಂತೆ ಕೆಲವೊಂದು ಕಾಯಿಲೆಗಳ ಚಿಕಿತ್ಸೆಯಲ್ಲಿಯೂ ಇದನ್ನು ಬಳಸುತ್ತಾರೆ.

**

ರೋಜಿ ಟ್ರೆಂಪೆಟ್

ಚಳಿಗಾಲ ಮುಗಿದು ಬೇಸಿಗೆ ಪ್ರವೇಶಿಸುತ್ತಿದ್ದಂತೆಯೇ, ರೋಜಿ ಟ್ರೆಂಪೆಟ್ ಗಿಡಗಳು ಹೂವುಗಳನ್ನು ಬಿಟ್ಟು ಶೋಭಾಯಮಾನವಾಗಿ ಕಂಗೊಳಿಸುತ್ತದೆ. ಇದರ ವೈಜ್ಞಾನಿಕ ಹೆಸರು ‘ತಬೂಬಿಯಾ ರೋಜಿಯಾ’ ಇದರ ಹೂಗಳು ಗುಲಾಬಿ ಬಣ್ಣದಲ್ಲಿ ಇದ್ದರೂ ವಿವಿಧ ರೀತಿಯ ಛಾಯೆಗಳಿಂದ (ಶೇಡ್‌) ಕೂಡಿರುತ್ತವೆ.

ಈ ಮರಗಳ ಮೂಲ ದಕ್ಷಿಣ ಆಫ್ರಿಕಾ. ಇದು ಹಲವು ವಿಧಧ ಔಷಧಿ ಗುಣಗಳನ್ನು ಒಳಗೊಂಡಿದೆ. ಜೀರ್ಣಕೋಶದಲ್ಲಿನ ಪ್ಯಾರಸೈಟ್‌ಗಳನ್ನು ತೊಲಗಿಸಲು, ಮಲೇರಿಯಾ, ಗರ್ಭಕೋಶಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳನ್ನು ತೊಲಗಿಸಲು ಇದರ ತೊಗಟೆಯನ್ನು ಔಷಧದಲ್ಲಿ ಬಳಸುತ್ತಾರೆ.

ಅಷ್ಟೇ ಅಲ್ಲ ರಕ್ತ ಹೀನತೆ, ಜೀರ್ಣಶಕ್ತಿ ಸಮಸ್ಯೆಗಳಿಗೂ ಇದು ನೆರವಾಗುತ್ತದೆ. ಈ ಮರದ ಬೇರು, ಎಲೆಗಳು, ಕಾಂಡದಿಂದ ತಯಾರಿಸುವ ಕಷಾಯ ಜ್ವರಕ್ಕೆ ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT