ಮುಳಬಾಗಿಲು: ನಿರಾಳರಾದ ಅಭ್ಯರ್ಥಿಗಳು

7
ದೇವರಿಗೆ ವಿಶೇಷ ಪೂಜೆ

ಮುಳಬಾಗಿಲು: ನಿರಾಳರಾದ ಅಭ್ಯರ್ಥಿಗಳು

Published:
Updated:
ಮುಳಬಾಗಿಲು: ನಿರಾಳರಾದ ಅಭ್ಯರ್ಥಿಗಳು

ಮುಳಬಾಗಿಲು: ಮೀಸಲು ವಿಧಾನಸಭೆ ಚುನಾವಣೆ ಮುಗಿದು ಭಾನುವಾರ ಅಭ್ಯರ್ಥಿಗಳು ಸ್ವಲ್ಪ ನಿರಾಳರಾದಂತೆ ಕಂಡು ಬಂದರು.

ಕ್ಷೇತ್ರದಲ್ಲಿ ಒಟ್ಟು 39 ಮಂದಿ ಚುನಾವಣೆಯನ್ನು ಎದುರಿಸಿದ್ದು, ಇದರಲ್ಲಿ ಮುಖ್ಯವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಚ್.ನಾಗೇಶ್, ಜೆಡಿಎಸ್ ಸಮೃದ್ಧಿ ಮಂಜುನಾಥ್ ಮತ್ತು ಬಿಜೆಪಿಯಿಂದ ಮಾಜಿ ಶಾಸಕ ಅಮರೇಶ್ ಚುನಾವಣಾ ಕಣದಲ್ಲಿ ಮುಖ್ಯ ಕೇಂದ್ರ ಬಿಂದುಗಳಾಗಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಚುನಾವಣೆಯ ಗುಂಗು ಮತ್ತು ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ಕಸರತ್ತಿನಲ್ಲಿದ್ದ ಅಭ್ಯರ್ಥಿಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಸಮೃದ್ಧಿ ಮಂಜುನಾಥ್ ಭಾನುವಾರ ಬೆಳಿಗ್ಗೆ ನಗರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮುಖಂಡರೊಂದಿಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಸ್ವಲ್ಪ ಕಾಲ ಮುಖಂಡರ ಜತೆ ಚರ್ಚಿಸಿ ಬೆಂಗಳೂರಿನ ತಮ್ಮ ನಿವಾಸದ ಕಡೆ ಪ್ರಯಾಣ ಬೆಳೆಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಚ್.ನಾಗೇಶ್ ತಮ್ಮ ಕುಟುಂಬದವರ ಜತೆಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕಾಲ ಕಳೆದರೆಂದು ತಿಳಿದುಬಂದಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಅಮರೇಶ್ ತಮ್ಮ ಕುಟುಂಬದವರ ಜತೆಯಲ್ಲಿ ನಗರದ ತಮ್ಮ ಮನೆಯಲ್ಲಿ ಕಾಲ ಕಳೆದರು.

ಬೆಟ್ಟಿಂಗ್: ಇಂತವರೆ, ಇಂತ ಪಕ್ಷವೆ ಗೆಲ್ಲಲಿದೆ ಎಂದು ನಿರ್ಧರಿಸಿ ಕೆಲ ಮುಖಂಡರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry