ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 67.66 ಮತದಾನ

ಬಿವಿಬಿ ಕಾಲೇಜಿನ ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು
Last Updated 14 ಮೇ 2018, 11:41 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಒಟ್ಟು ಶೇ 67.66ರಷ್ಟು ಮತದಾನವಾಗಿದೆ. ಕಣದಲ್ಲಿ ಉಳಿದಿರುವ 64 ಅಭ್ಯರ್ಥಿಗಳ ಭವಿಷ್ಯ ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದೆ. ಮತದಾರನ ನಿರ್ಧರ ಹೊರಬೀಳಲು ಇನ್ನೊಂದೇ ದಿನ ಬಾಕಿ ಇದೆ.

ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ; ಅಂದರೆ ಶೇ 73.66ರಷ್ಟು ಆಗಿದೆ. ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿ ಶೇ 63.51ರಷ್ಟು ಆಗಿದೆ. ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಶೇ 69.55, ಔರಾದ್‌ನಲ್ಲಿ ಶೇ 68.28, ಹುಮನಾಬಾದ್‌ನಲ್ಲಿ ಶೇ 66.42, ಬಸವಕಲ್ಯಾಣದಲ್ಲಿ ಶೇ 64.56 ರಷ್ಟು ಮತದಾನವಾಗಿದೆ.

ಮತದಾನ ಪ್ರಕ್ರಿಯೆ ಶನಿವಾರ ಸಂಜೆ ಪೂರ್ಣಗೊಂಡ ಕೂಡಲೇ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳು ಹಾಗೂ ಮತ ಖಾತರಿ ಯಂತ್ರಗಳನ್ನು (ವಿವಿ ಪ್ಯಾಟ್‌ಗಳು) ಸುರಕ್ಷಿತವಾಗಿ ತಂದು ಭೂಮರೆಡ್ಡಿ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಟ್ಟರು.

ಮತಯಂತ್ರಗಳ ಭದ್ರತೆಗಾಗಿ ಅರೆ ಸೇನಾಪಡೆ ಮತ್ತು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರೆ ಸೇನಾಪಡೆ ಸಿಬ್ಬಂದಿ ಭದ್ರತಾ ಕೊಠಡಿಗಳ ಬಾಗಿಲು ಮುಂದೆ ನಿಂತುಕೊಂಡು ಮತಯಂತ್ರಗಳನ್ನು ಕಾಯುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಮೇ 15ರಂದು ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕಾಲೇಜು ಕಟ್ಟಡದಲ್ಲಿ ಅಗತ್ಯದಷ್ಟು ಮತ ಎಣಿಕೆಯ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT