ಬಸವಕಲ್ಯಾಣ; ಶೇ 64.56 ಮತದಾನ

7
ಆಲಗೂಡನಲ್ಲಿ ಕಡಿಮೆ ಮೋರಖಂಡಿಯಲ್ಲಿ ಹೆಚ್ಚು ಮತದಾನ

ಬಸವಕಲ್ಯಾಣ; ಶೇ 64.56 ಮತದಾನ

Published:
Updated:

ಬಸವಕಲ್ಯಾಣ: ಕ್ಷೇತ್ರದಲ್ಲಿನ ಒಟ್ಟು 256 ಮತಗಟ್ಟೆಗಳಲ್ಲಿ 75,341 ಪುರುಷರು ಮತ್ತು 69,483 ಮಹಿಳೆಯರು ಒಳಗೊಂಡು ಒಟ್ಟು 1,44,824 ಜನ ಮತದಾನ ಮಾಡಿದ್ದು, ಶೇ 64.56ರಷ್ಟು ದಾಖಲಾಗಿದೆ.

ಆಲಗೂಡನ 198ನೇ ಮತಗಟ್ಟೆಯಲ್ಲಿ ಅತ್ಯಂತ ಕಡಿಮೆ –ಶೇ 37.97ರಷ್ಟು, ಮೋರಖಂಡಿಯ 3ನೇ ವಾರ್ಡ್ 124ನೇ ಮತಗಟ್ಟೆಯಲ್ಲಿ ಅತಿ ಹೆಚ್ಚು– ಶೇ 84.66ರಷ್ಟು ಮತದಾನವಾಗಿದೆ.

ಕೆಲ ಮತಗಟ್ಟೆಗಳಲ್ಲಿ ಶೇ 75ಕ್ಕಿಂತಲೂ ಅಧಿಕ ಮತದಾನವಾಗಿದೆ. ಸಸ್ತಾಪುರದ ಎಲ್ಲ ಮತಗಟ್ಟೆಗಳಲ್ಲಿಯೂ ಶೇ 75ಕ್ಕೂ ಅಧಿಕ ಮತದಾನವಾಗಿದೆ. ಇಲ್ಲಿನ 146 ನೇ ಮತಗಟ್ಟೆಯಲ್ಲಿ ಶೇ 75.26, 147ರಲ್ಲಿ ಶೇ 80.94, 148 ರಲ್ಲಿ ಶೇ 77.89, ಮತ್ತು 149ರಲ್ಲಿ ಶೇ 75ರಷ್ಟು ಮತದಾನವಾಗಿದೆ.

ಅಂತರಭಾರತಿ ತಾಂಡಾದ 20 ನೇ ಮತಗಟ್ಟೆಯಲ್ಲಿ ಶೇ 75.16, ಬಸವಕಲ್ಯಾಣದ 6 ನೇ ವಾರ್ಡಿನ 81 ನೇ ಮತಗಟ್ಟೆಯಲ್ಲಿ ಶೇ 79.82, 8 ನೇ ವಾರ್ಡಿನ 83ನೇ ಮತಗಟ್ಟೆಯಲ್ಲಿ ಶೇ 75, 9ನೇ ವಾರ್ಡಿನ 84 ನೇ ಮತಗಟ್ಟೆಯಲ್ಲಿ ಶೇ 77.40, 31 ನೇ ವಾರ್ಡಿನ 109ನೇ ಮತಗಟ್ಟೆಯಲ್ಲಿ ಶೇ 75 ರಷ್ಟು ಮತ್ತು ತ್ರಿಪುರಾಂತನ 112ನೇ ಮತಗಟ್ಟೆಯಲ್ಲಿ ಶೇ 75.38 ರಷ್ಟು ಮತದಾನವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry