ಕೇಂದ್ರಕ್ಕೆ ಮೂರು ಹಂತದ ಭದ್ರತೆ

7
ಭದ್ರತಾ ಕೊಠಡಿಯಲ್ಲಿ ಮತಯಂತ್ರ ಭದ್ರ– ಎಣಿಕೆ ಕಾರ್ಯಕ್ಕೆ 950 ಸಿಬ್ಬಂದಿ ನಿಯೋಜನೆ

ಕೇಂದ್ರಕ್ಕೆ ಮೂರು ಹಂತದ ಭದ್ರತೆ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಐದೂ ಕ್ಷೇತ್ರಗಳ ಮತಯಂತ್ರಗಳನ್ನು ನಗರದ ಬೇಲೂರು ರಸ್ತೆಯ ಶ್ರೀತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜಿನಲ್ಲಿ (ಎಸ್‌ಟಿಜೆ) ಸ್ಥಾಪಿಸಿರುವ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ. ಇದೇ 15ರಂದು ಮತ ಎಣಿಕೆ ನಡೆಯಲಿದೆ.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಭಾನುವಾರ ಮಧ್ಯಾಹ್ನ 1.55ರ ಹೊತ್ತಿಗೆ ಎಲ್ಲ ಕ್ಷೇತ್ರಗಳ ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿ ಇರಿಸಿ, ಬೀಗ ಹಾಕಿ ಮೊಹರು ಮಾಡಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಇದ್ದರು. 10 ಕೊಠಡಿಗಳಲ್ಲಿ ಮತಯಂತ್ರಗಳನ್ನುಇರಿಸಲಾಗಿದೆ. ಕೇಂದ್ರಕ್ಕೆ ಮೂರು ಹಂತದ ಭದ್ರತೆ ಒದಗಿಸಲಾಗಿದೆ’ಎಂದು ತಿಳಿಸಿದರು.

15ರಂದು ಬೆಳಿಗ್ಗೆ 7.30ಕ್ಕೆ ಅಂಚೆ ಮತಗಳ ಎಣಿಕೆ ನಡೆಯಲಿದೆ. 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮತ ಎಣಿಕೆ ಕಾರ್ಯಕ್ಕೆ 950 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಒಟ್ಟಾರೆ ಶೇ 2.67 ಹೆಚ್ಚು ಮತದಾನ ಆಗಿದೆ. ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಯೋಜನೆ (ಎಸ್‌ವಿಇಇಪಿ-ಸ್ವೀಪ್) ಕಾರ್ಯಕ್ರಮದಡಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಕೈಗೊಂಡಿದ್ದರಿಂದ ಮತದಾನ ಪ್ರಮಾಣದಲ್ಲಿ ಹೆಚ್ಚಳ ಆಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1,210 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಐದೂ ಕ್ಷೇತ್ರಗಳಲ್ಲೂ ಯಾವುದೇ ಸಮಸ್ಯೆ ಇಲ್ಲದೆ, ವ್ಯವಸ್ಥಿತವಾಗಿ ಮತದಾನ ನಡೆದಿದೆ ಎಂದು ಜಿಲ್ಲಾ ಚುನಾವಣಾ ವೀಕ್ಷಕರೂ ಹೇಳಿದ್ದಾರೆ ಎಂದರು.

ನಕ್ಸಲ್‌ ಪ್ರಭಾವಿತ ಪ್ರದೇಶ ಮತಗಟ್ಟೆ: ಶೇ 84.30

ನಕ್ಸಲ್‌ ಪ್ರಭಾವಿತ ಪ್ರದೇಶದಲ್ಲಿ ಸ್ಥಾಪಿಸಿದ್ದ 39 ಮತಗಟ್ಟೆಗಳಲ್ಲಿ ಒಟ್ಟು ಶೇ 84.30 ಮತದಾನ ಆಗಿದೆ. 18,746 ಮತದಾರರ ಪೈಕಿ 15,803 ಮಂದಿ ಹಕ್ಕು ಚಲಾಯಿಸಿದ್ದಾರೆ.b9,351 ಪುರುಷ ಮತದಾರರ ಪೈಕಿ 8,034 (ಶೇ 85.92) ಹಾಗೂ 9,395 ಮಹಿಳಾ ಮತದಾರರ ಪೈಕಿ 7,769 (ಶೇ 82.69) ಮಂದಿ ಮತ ಚಲಾಯಿಸಿದ್ದಾರೆ. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 33 ಹಾಗೂ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಸಖಿ ಮತಗಟ್ಟೆ: ಶೇ 68.37 ಮತದಾನ

ಜಿಲ್ಲೆಯಲ್ಲಿ ಸ್ಥಾಪಿಸಿದ್ದ 20 ಸಖಿ ಮತಗಟ್ಟೆಗಳ ಒಟ್ಟು 20,127 ಮತದಾರರ ಪೈಕಿ 13,761 (ಶೇ 68.37) ಮಂದಿ ಮತ ಚಲಾಯಿಸಿದ್ದಾರೆ. 9,666 ಪುರುಷ ಮತದಾರರ ಪೈಕಿ 6,636 (ಶೇ 68.65) ಹಾಗೂ

10,460 ಮಹಿಳಾ ಮತದಾರರ ;ಪೈಕಿ 7,125 (ಶೇ 68.12) ಮಂದಿ ಹಕ್ಕು ಚಲಾಯಿಸಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 56ರಲ್ಲಿ ಶೇ 76.74, 93ರಲ್ಲಿ ಶೇ 68.89, 100ರಲ್ಲಿ ಶೇ 54.97, 101ರಲ್ಲಿ ಶೇ 66.29, 105ರಲ್ಲಿ ಶೇ 65.68, 117ರಲ್ಲಿ ಶೇ 60.65, 135ರಲ್ಲಿ ಶೇ 64.06, 137ರಲ್ಲಿ ಶೇ 66.33, 143ರಲ್ಲಿ ಶೇ 69.21, 150ರಲ್ಲಿ ಶೇ 72.60, 158ರಲ್ಲಿ ಶೇ 64.54, 225ರಲ್ಲಿ ಶೇ 78.36, ಶೃಂಗೇರಿ ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 59ರಲ್ಲಿ ಶೇ62.12 ಹಾಗೂ 158ರಲ್ಲಿ ಶೇ 74.4 ಮೂಡಿಗೆರೆ ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 171ರಲ್ಲಿ ಶೇ 57 ಮತ್ತು 180ರಲ್ಲಿ ಶೇ 60.21, ತರೀಕೆರೆ ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 92ರಲ್ಲಿ ಶೇ 75.03 ಹಾಗೂ 95ರಲ್ಲಿ ಶೇ 81.70 ಕಡೂರು ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 85ರಲ್ಲಿ ಶೇ 76.65 ಹಾಗೂ 92ರಲ್ಲಿ 77.38 ಮತದಾನ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 20 ಸಖಿ (ಪಿಂಕ್‌) ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚಿಕ್ಕಮಗಳೂರು ನಗರದಲ್ಲಿ 10 ಹಾಗೂ ಗ್ರಾಮಾಂತರದಲ್ಲಿ 2 ಹಾಗೂ ಇತರ ನಾಲ್ಕು ಕ್ಷೇತ್ರಗಳಲ್ಲಿ ತಲಾ ಎರಡು ಸ್ಥಾಪಿಸಲಾಗಿತ್ತು.

ಜಿಲ್ಲೆಯಲ್ಲಿ ಸ್ಥಾಪಿಸಿದ್ದ 20 ಸಖಿ ಮತಗಟ್ಟೆಗಳ ಒಟ್ಟು 20,127 ಮತದಾರರ ಪೈಕಿ 13,761 (ಶೇ 68.37) ಮಂದಿ ಮತ ಚಲಾಯಿಸಿದ್ದಾರೆ. 9,666 ಪುರುಷ ಮತದಾರರ ಪೈಕಿ 6,636 (ಶೇ 68.65) ಹಾಗೂ 10,460 ಮಹಿಳಾ ಮತದಾರರ; ಪೈಕಿ 7,125 (ಶೇ 68.12) ಮಂದಿ ಹಕ್ಕು ಚಲಾಯಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 56ರಲ್ಲಿ ಶೇ 76.74, 93ರಲ್ಲಿ ಶೇ 68.89, 100ರಲ್ಲಿ ಶೇ 54.97, 101ರಲ್ಲಿ ಶೇ 66.29, 105ರಲ್ಲಿ ಶೇ 65.68, 117ರಲ್ಲಿ ಶೇ 60.65, 135ರಲ್ಲಿ ಶೇ 64.06, 137ರಲ್ಲಿ ಶೇ 66.33, 143ರಲ್ಲಿ ಶೇ 69.21, 150ರಲ್ಲಿ ಶೇ 72.60, 158ರಲ್ಲಿ ಶೇ 64.54, 225ರಲ್ಲಿ ಶೇ 78.36, ಶೃಂಗೇರಿ ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 59ರಲ್ಲಿ ಶೇ62.12 ಹಾಗೂ 158ರಲ್ಲಿ ಶೇ 74.4 ಮೂಡಿಗೆರೆ ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 171ರಲ್ಲಿ ಶೇ 57 ಮತ್ತು 180ರಲ್ಲಿ ಶೇ 60.21, ತರೀಕೆರೆ ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 92ರಲ್ಲಿ ಶೇ 75.03 ಹಾಗೂ 95ರಲ್ಲಿ ಶೇ 81.70 ಕಡೂರು ಕ್ಷೇತ್ರದ ಸಖಿಮತಗಟ್ಟೆ ಸಂಖ್ಯೆ 85ರಲ್ಲಿ ಶೇ 76.65 ಹಾಗೂ 92ರಲ್ಲಿ 77.38 ಮತದಾನ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 20 ಸಖಿ (ಪಿಂಕ್‌) ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚಿಕ್ಕಮಗಳೂರು ನಗರದಲ್ಲಿ 10 ಹಾಗೂ ಗ್ರಾಮಾಂತರದಲ್ಲಿ 2 ಹಾಗೂ ಇತರ ನಾಲ್ಕು ಕ್ಷೇತ್ರಗಳಲ್ಲಿ ತಲಾ ಎರಡು ಸ್ಥಾಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry