ಶಾಸಕ ಸತೀಶ್ ಸೈಲ್ ವಿರುದ್ಧ ದೂರು

7

ಶಾಸಕ ಸತೀಶ್ ಸೈಲ್ ವಿರುದ್ಧ ದೂರು

Published:
Updated:
ಶಾಸಕ ಸತೀಶ್ ಸೈಲ್ ವಿರುದ್ಧ ದೂರು

ಅಂಕೋಲಾ: ಕಾರವಾರ– ಅಂಕೋಲಾ ಕ್ಷೇತ್ರದ ಶಾಸಕ, ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಸತೀಶ್ ಸೈಲ್ ವಿರುದ್ಧ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.

ಆದಾಯ ತೆರಿಗೆ ಇಲಾಖೆಯ ಗೋವಾ ವಿಭಾಗದ ಉಪನಿರ್ದೇಶಕ ಬಾಳಾಸಾಹೇಬ ಬಾಪುರಾವ್ ನಾಗ್ವೆ ದೂರು ನೀಡಿದವರು.

‘ಸತೀಶ್ ಸೈಲ್ ಅವರು ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮದ ಸಕಲಬೇಣದಲ್ಲಿರುವ ತಮ್ಮ ಆಪ್ತ ಮಂಗಲದಾಸ್ ಕಾಮತ್ ಅವರ ಕಚೇರಿಯಲ್ಲಿ ಹಣ ಹಂಚುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಈ ಸಂಬಂಧ ಮೇ 11ರಂದು ಬೆಳಿಗ್ಗೆ 6ಗಂಟೆಗೆ ದಾಳಿ ಮಾಡಲಾಗಿತ್ತು. ತಪಾಸಣೆ ಮಾಡುವ ಸಲುವಾಗಿ ಸೈಲ್ ಅವರ ಕಾರನ್ನು ನಿಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದರು. ಆದರೆ, ಅವರು ಕಾರನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದರು. ಈ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry