ಶಂಶೇರಾದಲ್ಲಿ ವಾಣಿ ಕಪೂರ್‌

7

ಶಂಶೇರಾದಲ್ಲಿ ವಾಣಿ ಕಪೂರ್‌

Published:
Updated:
ಶಂಶೇರಾದಲ್ಲಿ ವಾಣಿ ಕಪೂರ್‌

ಯಶ್‌ರಾಜ್‌ ಫಿಲ್ಮ್ಸ್‌ನ ಮುಂದಿನ ಪ್ರಾಜೆಕ್ಟ್‌ ‘ಶಂಶೇರಾ’. ರಣಬೀರ್‌ ಕಪೂರ್‌ ನಾಯಕ ಎಂದಾಗಲೇ ನಿರ್ಧಾರವಾಗಿದೆ. ಇದೀಗ ರಣದೀರ್‌ ಕಪೂರ್‌ಗೆ ನಾಯಕಿಯಾಗಿ ವಾಣಿಕಪೂರ್‌ ನಟಿಸಲಿದ್ದಾರೆ ಎಂಬ ಸುದ್ದಿ ಬಿ ಟೌನ್‌ನಲ್ಲಿದೆ. ಇದಕ್ಕೆ ವಾಣಿಕಪೂರ್‌ ಸಹ ಆಗಲೇ ಸಹಮತಿ ಒತ್ತಿದ್ದಾಗಿದೆ.

29 ವರ್ಷದ ವಾಣಿ ಈ ಹಿಂದೆ ಬೇಫಿಕ್ರೆ ಚಿತ್ರದಲ್ಲಿ ರಣವೀರ್‌ ಸಿಂಗ್‌ ಜೊತೆಗೆ ನಟಿಸಿದ್ದರು. ರಣವೀರ್‌ ಜೊತೆಗಿನ ಬಿಸಿಬಿಸಿ ಮುತ್ತಿನ ದೃಶ್ಯಗಳಿಂದಾಗಿ ಚರ್ಚೆಯಲ್ಲಿದ್ದರು. ಸಂದರ್ಶನವೊಂದರಲ್ಲಿ ಅಂತೂ ಬೇಫಿಕ್ರೆ ಚಿತ್ರದಲ್ಲಿ ಮುತ್ತಿಡುವ ದೃಶ್ಯಕ್ಕೆ ಯಾವ ತಯಾರಿಯೂ ಬೇಕಿರಲಿಲ್ಲ. ಅದೆಷ್ಟು ಸಲ ಮುತ್ತಿಟ್ಟಿದ್ದೆವೆಂದರೆ ಅದು ಕೇವಲ ಒಂದು ಕ್ರಿಯೆಯಾಗಿ ಬದಲಾಗಿತ್ತು. ಸ್ಯಾಂಡ್‌ವಿಚ್‌ ತಿನ್ನುತ್ತಲೂ ಮುತ್ತಿಡುತ್ತಿದ್ದೆವು ಎಂದು ಹೇಳಿ ಸುದ್ದಿಯಾಗಿದ್ದರು.

ಶುದ್ಧ ದೇಸಿ ರೋಮ್ಯಾನ್ಸ್‌ನಲ್ಲಿಯೂ ನಟಿಸಿರುವ ವಾಣಿ ಕಪೂರ್‌ ಈ ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ನಿರ್ದೇಶಕ ಕರಣ್‌ ಮಲ್ಹೋತ್ರಾ ಈ ಚಿತ್ರದ ಪಾತ್ರಕ್ಕೆ ವಾಣಿ ಹೇಳಿ ಮಾಡಿಸಿದಂತಿದ್ದಾರೆ ಎಂದು ಮೆಚ್ಚುಗೆಯನ್ನೂ ಸೂಸಿರುವುದು ಅವರ ಉತ್ಸಾಹ ಇಮ್ಮಡಿಯಾಗಿದೆ.

ವಾಣಿ, ಸಮರ್ಥ ನಟಿ, ನೃತ್ಯಾಂಗನೆ ಮತ್ತು ಸುಂದರ ತಾರೆ. ತೆರೆಯ ಮೇಲೆ ತಾಜಾಮುಖವೊಂದನ್ನು ತೋರಿಸಲು ನಾವು ಹಾತೊರೆಯುತ್ತಿದ್ದೆವು. ವಾಣಿ ಅದಕ್ಕೆ ಸೂಕ್ತವಾಗಿದ್ದಾರೆ ಎಂದು ಮುಕ್ತ ಕಂಠದಿಂದ ನಿರ್ದೇಶಕರು ಹೊಗಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry