ಸರಳ ಅಲಂಕಾರದಲ್ಲಿ ಮಲ್ಲಿಕಾ ಶೆರಾವತ್...

7

ಸರಳ ಅಲಂಕಾರದಲ್ಲಿ ಮಲ್ಲಿಕಾ ಶೆರಾವತ್...

Published:
Updated:
ಸರಳ ಅಲಂಕಾರದಲ್ಲಿ ಮಲ್ಲಿಕಾ ಶೆರಾವತ್...

ಮಲ್ಲಿಕಾ ಶೆರಾವತ್‌ ಅಂದ ಕೂಡಲೇ ನೆನಪಾಗಲಿಕ್ಕಿಲ್ಲ. ಆದರೆ ಮರ್ಡರ್‌ ಚಿತ್ರದ ಚುಂಬಕ ನಾಯಕಿ ಎಂದರೆ ಕೂಡಲೇ ನೆನಪಾಗಬಹುದು. ಈ ವರ್ಷದ ಆರಂಭದಲ್ಲಿ ಫ್ರಾನ್ಸ್‌ನಲ್ಲಿ ಮನೆ ಬಾಡಿಗೆ ಕಟ್ಟದೇ ಇರುವುದರಿಂದ ಅಲ್ಲಿಯ ನ್ಯಾಯಾಲಯವು ಮನೆ ಖಾಲಿ ಮಾಡಲು ಆದೇಶಿಸಿತ್ತು. ತನ್ನ ಫ್ರೆಂಚ್‌ ಪತಿಯೊಂದಿಗೆ ಮನೆ ಖಾಲಿ ಮಾಡಿದ ಸುದ್ದಿ ಬಾಲಿವುಡ್‌ನ ಅಂಗಳದಲ್ಲೆಲ್ಲ ಹರಿದಾಡಿತ್ತು. ಅದಾದ ನಂತರ ಮಲ್ಲಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಕಾನ್ಸ್‌ ಉತ್ಸವದಲ್ಲಿಯೇ. ಈ ಉತ್ಸವದಲ್ಲಿ ಈ ವರ್ಷ ಆದಷ್ಟೂ ಕಡಿಮೆ ಮೇಕಪ್‌ ಮತ್ತು ಸರಳ ಉಡುಗೆಯಿಂದ ಮಲ್ಲಿಕಾ ರೆಡ್‌ಕಾರ್ಪೆಟ್‌ ಮೇಲೆ ಹೆಜ್ಜೆಹಾಕಿದ್ದಾರೆ.

ಮೇ ಹತ್ತರಂದು ತಿಳಿನೀಲಿ ಬಣ್ಣದ ಮೈಗಂಟಿಕೊಳ್ಳುವ ಪಾರದರ್ಶಕ ಉಡುಗೆ ತೊಟ್ಟ ಮಲ್ಲಿಕಾ ತಮ್ಮ ಚರ್ಮದ ವರ್ಣಕ್ಕೆ ಹೊಂದುವಂಥ ಕಂದುಬಣ್ಣದ ತುಟಿರಂಗನ್ನು ಬಳಸಿದ್ದಾರೆ.

ಪ್ರತಿಸಲವೂ ಗಾಢವರ್ಣದ ತುಟಿರಂಗನ್ನು ಬಳಸುತ್ತಿದ್ದ ಮಲ್ಲಿಕಾ ಈ ಸಲ ಸಾಧ್ಯವಿದ್ದಷ್ಟೂ ಸರಳ ಉಡುಗೆಯೆಡೆಗೆ ಒಲವು ತೋರಿದ್ದಾರೆ. ಕರಬೂಜು ಬಣ್ಣದ ನಿಲುವಂಗಿಯ ಮೇಲೆ ಕಪ್ಪು ಹೂಗಳಿರುವ ಚಿತ್ತಾರದ ಉಡುಗೆಯನ್ನುಟ್ಟಿದ್ದರು. ಇದರಿಂದಾಗಿ ಮಲ್ಲಿಕಾಳಲ್ಲಿ ಉತ್ಸಾಹದ ಕೊರತೆಯಾಗಿದೆಯೇ? ಅವರ ಆರ್ಥಿಕ ಬದುಕು ಜರ್ಜರಿತವಾಗಿದೆಯೇ ಎಂಬ ಚರ್ಚೆ ಬಿಟೌನ್‌ನಲ್ಲಿ ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry