ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣನ ತಪ್ಪಿಗೆ...

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ನಮ್ಮ ಹಳ್ಳಿಗಳಲ್ಲಿ ‘ಕೋಣನ ತಪ್ಪಿಗೆ ಎತ್ತಿಗೆ ಬರೆ’ ಎಂಬ ಮಾತು ಆಡಿಕೊಳ್ಳುವುದಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈಚೆಗೆ ಈ ಮಾತು ಅಕ್ಷರಶಃ ನನ್ನ ಅನುಭವಕ್ಕೆ ಬಂತು. ಮೈಸೂರಿನಿಂದ ಉದಯಪುರಕ್ಕೆ ಹೋಗುವ ‘ಹಂಸಫರ್’ ರೈಲಿನಲ್ಲಿ ನನ್ನ ಮಗಳು ಪ್ರಯಾಣಿಸಬೇಕಿತ್ತು. ಅವಳನ್ನು ಕಳುಹಿಸಿಕೊಡಲು ಬಂದಿದ್ದೆ. ರೈಲು ಹೊರಡುವ ಸಮಯ ರಾತ್ರಿ 8.50 ಆಗಿದ್ದರಿಂದ 8 ಗಂಟೆ ಸುಮಾರಿಗೆ ರೈಲ್ವೆ ನಿಲ್ದಾಣ ಪ್ರವೇಶಿಸಿದ್ದೆವು. ನನ್ನ ಜೊತೆಯಲ್ಲಿ ನನ್ನ ಸ್ನೇಹಿತನೂ ಇದ್ದುದರಿಂದ ₹ 20 ತೆತ್ತು, ಪ್ಲಾಟ್‌ಫಾರ್ಮ್‌ನ ಎರಡು ಟಿಕೆಟ್ ತೆಗೆದುಕೊಂಡಿದ್ದೆ. ಆದರೆ ಏನೋ ತಾಂತ್ರಿಕ ತೊಂದರೆಯಿಂದಾಗಿ ಆ ರೈಲು ಅಂದು ಹುಬ್ಬಳ್ಳಿ ತಲುಪಿ, ಅಲ್ಲಿಂದ ಹೊರಟಾಗ ರಾತ್ರಿ 1.30 ಆಗಿತ್ತು. ಪ್ಲಾಟ್‌ಫಾರ್ಮ್ ಟಿಕೆಟ್ ಅವಧಿ ಎರಡು ತಾಸು ಮಾತ್ರ ಇರುವುದರಿಂದ ನಾನು ಮೂರು ಸಲ ಟಿಕೆಟ್ ಪಡೆಯಬೇಕಾಯಿತು. ಇದೇ ಅನುಭವ ಇತರರಿಗೂ ಆಗಿರಬಹುದು. ರೈಲು ಸಕಾಲಕ್ಕೆ ಬಂದಿದ್ದರೆ, ನಮಗೆ ಈ ಹಣ ಉಳಿಯುತ್ತಿತ್ತು. ತಡವಾದುದಕ್ಕೆ ಇಲಾಖೆ ಹೊಣೆಯೇ ಹೊರತು ಪ್ರಯಾಣಿಕರಲ್ಲವಲ್ಲ?

ತಾಂತ್ರಿಕ ತೊಂದರೆ ಆದಾಗ ಪ್ರಯಾಣಿಕರು ಸಹಕರಿಸಬೇಕಾಗುತ್ತದೆ. ಆದ್ದರಿಂದ ಇಲಾಖೆಯವರು ಪ್ಲಾಟ್‌ಫಾರ್ಮ್ ಟಿಕೆಟ್‌ ನೀಡುವಾಗ ಅದರಲ್ಲಿ ಯಾವ ರೈಲು ಎನ್ನುವುದನ್ನು ನಮೂದಿಸಿ, ಆ ರೈಲು ಹೊರಟ ನಂತರ ಟಿಕೆಟ್‌ನ ಸಮಯವನ್ನು ಕೆಲವು ನಿಮಿಷಕ್ಕೆ ಸೀಮಿತಗೊಳಿಸಿದರೆ ಈ ತೊಂದರೆ ತಪ್ಪುತ್ತದೆ. ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುವುದೇ?

ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT