ಅತ್ಯಾಚಾರ: ಅಪರಾಧಿಗೆ ಮೂರು ವರ್ಷ ಕಠಿಣ ಶಿಕ್ಷೆ

7

ಅತ್ಯಾಚಾರ: ಅಪರಾಧಿಗೆ ಮೂರು ವರ್ಷ ಕಠಿಣ ಶಿಕ್ಷೆ

Published:
Updated:

ಠಾಣೆ: 2016ರಲ್ಲಿ ಆರು ವರ್ಷದ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಮೊಹಮ್ಮದ್‌ ನಾಸಿರ್‌ ಅಬ್ದುಲ್ ರಶೀದ್‌ ಶೈಕ್‌ (50) ಎಂಬಾತನಿಗೆ ನ್ಯಾಯಾಲಯ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. 

ವಾದ ಆಲಿಸಿದ ವಿಶೇಷ ನ್ಯಾಯಾಧೀಶ ಆರ್‌.ಎನ್‌. ಬವಂಕರ್‌, ಶಿಕ್ಷೆಯ ಜೊತೆಗೆ ನಾಲ್ಕು ಸಾವಿರ ದಂಡ ವಿಧಿಸಿದ್ದಾರೆ.

ಅಪರಾಧಿ, ಬಾಲಕಿಯ ಪಕ್ಕದ ಮನೆಯವನು. ಬಾಲಕಿ ಅಂಗಡಿಗೆ ಹೋಗಿದ್ದಾಗ ಬಲವಂತವಾಗಿ ಆಕೆಯನ್ನು ಆಟೊದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ನಡೆಯಲು ಆಗದ ಸ್ಥಿತಿಯಲ್ಲಿ ಮನೆಗೆ ವಾಪಸಾದ ಬಾಲಕಿ ನಡೆದ ಘಟನೆಯನ್ನು ಮನೆಯವರ ಬಳಿ ಹೇಳಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry