ಮುಂದಿನ ವಾರ ಮೋದಿ ರಷ್ಯಾಕ್ಕೆ

7

ಮುಂದಿನ ವಾರ ಮೋದಿ ರಷ್ಯಾಕ್ಕೆ

Published:
Updated:

ನವದೆಹಲಿ: ‘ಈ ತಿಂಗಳ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಲಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆಗೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಪ್ರಕಟಿಸಿದೆ.

‘ಸೋಚಿಯಲ್ಲಿ ಸಭೆ ನಡೆಯಲಿದ್ದು, ದ್ವಿಪಕ್ಷೀಯ ವಿಷಯಗಳು, ಅಂತರರಾಷ್ಟ್ರೀಯ ವಿಚಾರ, ದೀರ್ಘಕಾಲಿಕ ಸಹಭಾಗಿತ್ವ ಕುರಿತಂತೆ ಉಭಯ ದೇಶಗಳ ನಾಯಕರು ಪ್ರಮುಖವಾಗಿ ಚರ್ಚೆ ನಡೆಸಲಿದ್ದಾರೆ’ ಎಂದು ಸಚಿವಾಲಯ ತಿಳಿಸಿದೆ.

ಕಳೆದ ತಿಂಗಳು ಚೀನಾದ ವುಹಾನ್‌ ನಗರಕ್ಕೆ ಭೇಟಿ ನೀಡಿದ್ದ ಮೋದಿ ಅಲ್ಲಿನ ಅಧ್ಯಕ್ಷ ಷಿ ಜಿನ್‌ ಪಿಂಗ್‌ ಜೊತೆಗೆ ಮಾತುಕತೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry