ಉತ್ತರ ಮ್ಯಾನ್ಮಾರ್‌ನಲ್ಲಿ ಇಬ್ಬರು ಚೀನಿಯರ ಹತ್ಯೆ

7

ಉತ್ತರ ಮ್ಯಾನ್ಮಾರ್‌ನಲ್ಲಿ ಇಬ್ಬರು ಚೀನಿಯರ ಹತ್ಯೆ

Published:
Updated:

ಬೀಜಿಂಗ್‌: ಉತ್ತರ ಮ್ಯಾನ್ಮಾರ್‌ನಲ್ಲಿ ಶನಿವಾರ ನಡೆದ ಜನಾಂಗೀಯ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಚೀನಿಯರೂ ಸೇರಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಚೀನಾದ ಗಡಿಯಲ್ಲಿರುವ ಭದ್ರತಾ ಪಡೆಗಳ ನೆಲೆಗಳ ಮೇಲೆ ಜನಾಂಗೀಯ ದಂಗೆಕೋರರು ನಡೆಸಿದ ರಾಕೆಟ್‌ ಮತ್ತು ಗುಂಡಿನ ದಾಳಿಯಲ್ಲಿ 19 ಜನ ಅಸುನೀಗಿದ್ದರು.

‘ಮೂರು ರಾಕೆಟ್‌ಗಳು ಹಾಗೂ ಕೆಲವು ಬುಲೆಟ್‌ಗಳು ಚೀನಾ ವ್ಯಾಪ್ತಿಯ ಪ್ರದೇಶದಲ್ಲಿ ಬಿದ್ದಿವೆ’ ಎಂದು ಚೀನಾ ವಕ್ತಾರ ಲು ಕಾಂಗ್‌ ಹೇಳಿದ್ದಾರೆ.

ಇಬ್ಬರು ಚೀನಿಯರು ಹೇಗೆ ಹತ್ಯೆಯಾಗಿದ್ದಾರೆ ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಹೆದರಿ ದೇಶ ತೊರೆದ 300ಕ್ಕೂ ಹೆಚ್ಚು ರೊಹಿಂಗ್ಯಾ ಮುಸ್ಲಿಮರಿಗೆ ಚೀನಾ ಆಶ್ರಯ ನೀಡಿದೆ. ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಿಂಸಾಚಾರ ಕಳೆದ ಜನವರಿಯಿಂದ ಇನ್ನೂ ತೀವ್ರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry