ಗುರುವಾರ , ಮಾರ್ಚ್ 4, 2021
29 °C

ಗಾಜಾದಲ್ಲಿ ಪ್ರತಿಭಟನೆ: 41 ಪ್ಯಾಲೆಸ್ಟೀನಿಯರ ಹತ್ಯೆ

ಎಪಿ Updated:

ಅಕ್ಷರ ಗಾತ್ರ : | |

ಗಾಜಾದಲ್ಲಿ ಪ್ರತಿಭಟನೆ: 41 ಪ್ಯಾಲೆಸ್ಟೀನಿಯರ ಹತ್ಯೆ

ಗಾಜಾ: ಜೆರುಸಲೇಂನಲ್ಲಿ ಅಮೆರಿಕದ ರಾಯಭಾರ ಕಚೇರಿ ಸ್ಥಾಪನೆಗೆ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 41 ಪ್ಯಾಲೆಸ್ಟೀನಿಯರು ಇಸ್ರೇಲಿ ಸೇನಾ ಪಡೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

2014ರ ನಂತರ ನಡೆದ ಅತಿದೊಡ್ಡ ಹಿಂಸಾಚಾರ ಇದು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ಯಾಲೆಸ್ಟೀನಿಯರು ಗಾಜಾ ಪಟ್ಟಿಯಲ್ಲಿ ಗೋಧಿ ಬೆಳೆಗೆ ಮತ್ತು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಇಸ್ರೇಲಿ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

‘ಪ್ರತಿಭಟನಾಕಾರರು ಗಡಿಯಲ್ಲಿನ ತಂತಿಬೇಲಿ ದಾಟಿ ಒಳ ನುಗ್ಗುತ್ತಿದ್ದರು. ನಮ್ಮ ಸೈನಿಕರನ್ನು ಸುಟ್ಟು ಹಾಕಲು ಯತ್ನಿಸುತ್ತಿದ್ದರು. ಅಲ್ಲದೆ, ಬಾಂಬ್‌ ಹಾಕಲು ಪ್ರಯತ್ನಿಸಿದ್ದರಿಂದ ಮೂವರು ಪ್ಯಾಲೆಸ್ಟೀನಿಯನ್ನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ’ ಎಂದು ಇಸ್ರೇಲಿ ಸೇನೆ ಹೇಳಿದೆ.

772 ಪ್ರತಿಭಟನಾಕಾರರು ಗಾಯಗೊಂಡಿದ್ದು, ಈ ಪೈಕಿ 86 ಜನರ ಸ್ಥಿತಿ ಗಂಭೀರವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.