ತರಕಾರ ಚೀಲದಲ್ಲಿ ಹೆಣ್ಣು ಶಿಶು ಪತ್ತೆ

7

ತರಕಾರ ಚೀಲದಲ್ಲಿ ಹೆಣ್ಣು ಶಿಶು ಪತ್ತೆ

Published:
Updated:

ಬೆಂಗಳೂರು:ರಾಜರಾಜೇಶ್ವರಿ ನಗರದ ರಸ್ತೆಯಲ್ಲಿ ಬಿಸಾಡಿದ್ದ ತರಕಾರಿ ಚೀಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.

ಪಟ್ಟಣಗೆರೆ ಬಳಿಯ ಬಿಎಚ್‍ಇಎಲ್‍ ಪ್ರದೇಶದಲ್ಲಿ ಮಧ್ಯಾಹ್ನ ಮಗು ಅಳುತ್ತಿದ್ದ ಶಬ್ದ ಕೇಳಿಸಿತು. ಸ್ಥಳೀಯರು, ಚೀಲದ ಬಳಿ ಹೋಗಿ ನೋಡಿದಾಗ ಶಿಶು ಕಂಡಿದೆ ಎಂದು ಸೋಮವಾರ ಪೊಲೀಸರು ತಿಳಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಶಿಶುವಿಗೆ ಚಿಕಿತ್ಸೆ ಕೊಡಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುರ್ಪದಿಗೆ ಒಪ್ಪಿಸಿದ್ದೇವೆ. ಸದ್ಯ ಮಗು ಆರೋಗ್ಯವಾಗಿದೆ ಎಂದರು.‌

ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಚೀಲದಲ್ಲಿಟ್ಟು ಹೋಗಿದ್ದಾರೆ. ಸ್ಥಳೀಯರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry