ಬುಧವಾರ, ಫೆಬ್ರವರಿ 24, 2021
23 °C
ಬೆಂಗಳೂರಿನ ವನ್ಯಜೀವಿ ತಜ್ಞರಿಂದ ಅಧ್ಯಯನ

ಬಂಡೀಪುರದಲ್ಲಿ ಭಿಕ್ಷೆ ಬೇಡುವ ಮಂಗಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡೀಪುರದಲ್ಲಿ ಭಿಕ್ಷೆ ಬೇಡುವ ಮಂಗಗಳು!

ನವದೆಹಲಿ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಡು ಮಂಗಗಳು ಮನುಷ್ಯರ ರೀತಿಯಲ್ಲಿ ಭಿಕ್ಷೆ ಬೇಡುತ್ತಿವೆ!

ಯಾವುದೇ ತರಬೇತಿ ಇಲ್ಲದ ಕಾಡು ಮಂಗಗಳ ಈ ವರ್ತನೆಯ ಬಗ್ಗೆ ಬೆಂಗಳೂರಿನ ವನ್ಯಜೀವಿ ತಜ್ಞರು ಮತ್ತು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ (ನಿಯಾಸ್) ತಜ್ಞರು ಅಧ್ಯಯನ ನಡೆಸಿದ್ದಾರೆ.

ಎಲ್ಲ ಕಾಡು ಮಂಗಗಳು ಹೀಗೆ ವರ್ತಿಸುತ್ತಿಲ್ಲ. ದೊಡ್ಡ ಮಂಗಗಳು ಯಥಾರೀತಿ ಪ್ರವಾಸಿಗರ ಆಹಾರ ಕಸಿದುಕೊಳ್ಳುವ ಕೋತಿ ಚೇಷ್ಟೆ ಮುಂದುವರಿಸಿವೆ.

ಆದರೆ, 2 ರಿಂದ 4 ವರ್ಷದ ಮಂಗಗಳು ಮಾತ್ರ ಭಿಕ್ಷೆ ಬೇಡುತ್ತಿವೆ. ಮೆಲುವಾಗಿ ಕೂಗಿ ಪ್ರವಾಸಿಗರ ಗಮನ ಸೆಳೆಯುವ ಮರಿಗಳು, ತಮ್ಮನ್ನು ಗಮನಿಸಿದ ತಕ್ಷಣ ಕೈ ಚಾಚಿ ಆಹಾರಕ್ಕಾಗಿ ಬೇಡುತ್ತವೆ. 60 ಹಾಗೂ 32 ಕಾಡುಮಂಗಗಳ ಎರಡು ಪ್ರತ್ಯೇಕ ಗುಂಪುಗಳ ಮೇಲೆ ಅಧ್ಯಯನ ನಡೆಸಲಾಗಿದೆ.

ಪ್ರವಾಸಿಗರು ಆಹಾರ ನೀಡುತ್ತಾರೋ ಇಲ್ಲವೋ ಎಂದು ಕೊನೆಯವರೆಗೂ ಈ ಮಂಗಗಳು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತವೆ. ಇವೆಲ್ಲ ಉದ್ದೇಶಪೂರ್ವಕವಾಗಿ ಸಂವಹನ ಸಾಧಿಸುವ ರೀತಿ ಎಂದು ತಜ್ಞರು ಗುರುತಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.