ಅಶ್ಲೀಲ ಸಂದೇಶ; ಎಎಸ್‌ಐ ವಿರುದ್ಧ ಯುವತಿ ದೂರು

7
ಫೇಸ್‌ಬುಕ್‌ನಲ್ಲಿ ಫೋಸ್ಟ್‌ ಮಾಡಿದ ಯುವತಿ

ಅಶ್ಲೀಲ ಸಂದೇಶ; ಎಎಸ್‌ಐ ವಿರುದ್ಧ ಯುವತಿ ದೂರು

Published:
Updated:
ಅಶ್ಲೀಲ ಸಂದೇಶ; ಎಎಸ್‌ಐ ವಿರುದ್ಧ ಯುವತಿ ದೂರು

ಬೆಂಗಳೂರು: ‘ಎಎಸ್‌ಐ ಅಬ್ದುಲ್ ಜಾಫರ್ ಮುಲ್ಲಾ ಎಂಬುವರು ಅಶ್ಲೀಲ ಸಂದೇಶ ಹಾಗೂ ವಿಡಿಯೊ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಯುವತಿಯೊಬ್ಬರು, ನಗರದ ಪೊಲೀಸರಿಗೆ ದೂರು ನೀಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ, ಫೇಸ್‌ಬುಕ್‌ ಪೋಸ್ಟ್‌ ಅನ್ನು ‘ಬೆಂಗಳೂರು ಸಿಟಿ ಪೊಲೀಸ್’ ಪುಟಕ್ಕೆ ಟ್ಯಾಗ್‌ ಮಾಡಿ ಅಳಲು ತೋಡಿಕೊಂಡಿದ್ದಾರೆ. ಎಎಸ್‌ಐ ಫೋಟೊವನ್ನೂ ಅದಕ್ಕೆ ಲಗತ್ತಿಸಿದ್ದಾರೆ. ಅದರನ್ವಯ ದೂರು ಸ್ವೀಕರಿಸಿರುವ ಪೊಲೀಸರು, ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

‘ಈ ಚಿತ್ರದಲ್ಲಿರುವ ವ್ಯಕ್ತಿ ಪೊಲೀಸ್‌ ಇಲಾಖೆಗೆ ಸೇರಿದವರು. ಸಾರ್ವಜನಿಕ ಸೇವೆ ಮಾಡುವ ಜವಾಬ್ದಾರಿ ಹೊಂದಿರುವವರು. ಆದರೆ, ನನಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೊಗಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ನನಗೆ ಗಾಬರಿಯಾಗಿದೆ’ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

‘ಪೊಲೀಸರು ಸಾರ್ವಜನಿಕರೊಂದಿಗೆ ಒಡನಾಡವಿಟ್ಟುಕೊಳ್ಳಬೇಕು. ಅದು ಈ ರೀತಿಯದ್ದಲ್ಲ.  ಪೊಲೀಸರು ಯಾವಾಗಲೂ ಅಪರಾಧವನ್ನು ತಡೆಯಬೇಕು. ಅದನ್ನು ಬಿಟ್ಟು ತಾವೇ ಅಪರಾಧ ಮಾಡಬಾರದು. ಹೆಣ್ಣಾದ ನನಗೆ ಇಲ್ಲಿ ಸುರಕ್ಷತೆ ಇಲ್ಲದಂತಾಗಿದೆ’.

‘ಈ ಪೋಸ್ಟ್ ಪ್ರಕಟಿಸಿದ ನಂತರ ನನಗೆ ಏನು ಬೇಕಾದರೂ ಆಗಬಹುದು. ಆದರೆ, ನಿಮಗೆಲ್ಲ ಘಟನೆ ಹಾಗೂ ನಿಜಾಂಶ ಗೊತ್ತಾಗಲಿ ಎಂದು ಈ ಪೋಸ್ಟ್‌ ಮಾಡಿದ್ದೇನೆ. ಎಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಯುವತಿಯ ಪೋಸ್ಟ್‌ ಅನ್ನು ಹಲವರು, ‘ಕ್ರೈಂ ಫ್ರಮ್‌ ಪೊಲೀಸ್’ ಹಾಗೂ ‘ಅನ್‌ ಸೇಫ್‌ ಇಂಡಿಯಾ’ ಹೆಸರಿನಡಿ ಮರು ಪ್ರಕಟಿಸಿದ್ದಾರೆ. 

ಪರಿಶೀಲನೆ: ‘ಯುವತಿಯ ಪೋಸ್ಟ್‌ನಲ್ಲಿರುವ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎಎಸ್‌ಐ ಅಬ್ದುಲ್ ಸಂಪರ್ಕಕ್ಕೆ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry