ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಾರಥ್ಯದ ಪಾಸ್‌ಪೋರ್ಟ್‌ ಕೇಂದ್ರ ಶುರು

Last Updated 14 ಮೇ 2018, 19:54 IST
ಅಕ್ಷರ ಗಾತ್ರ

ಫಗ್‌ವಾಡಾ, ಪಂಜಾಬ್: ಕೇವಲ ಮಹಿಳೆಯರೇ ಕಾರ್ಯ ನಿರ್ವಹಿಸುವ ಅಂಚೆಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಒಪಿಎಸ್‌ಕೆ) ಪಂಜಾಬ್‌ನ ಫಗ್‌ವಾಡಾದಲ್ಲಿ ಸೋಮವಾರ ಆರಂಭಗೊಂಡಿತು.

ಕೇಂದ್ರ ಸಚಿವ ವಿಜಯ್ ಸಂಪ್ಲಾ ಅವರು ಪ್ರಧಾನ ಅಂಚೆ ಕಚೇರಿಯಲ್ಲಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಿದರು. ಇದು ದೇಶದ 192ನೇ ಪಾಸ್‌ಪೋರ್ಟ್ ಸೇವಾ ಕೇಂದ್ರವಾಗಿದೆ. ಆದರೆ ಇಲ್ಲಿನ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿರುವುದು ವಿಶೇಷ. ಮಹಿಳಾ ಸಬಲೀಕರಣದ ಭಾಗವಾಗಿ ಇದು ಕಾರ್ಯಾರಂಭ ಮಾಡಿದೆ ಎಂದು ಸಚಿವರು ಹೇಳಿದ್ದಾರೆ.

ಪಾಸ್‌ಪೋರ್ಟ್ ಇಲಾಖೆಯ ಪರಿಶೀಲನಾ ಅಧಿಕಾರಿ ಮಾಧುರಿ ಭಾವಿ ಅವರು ಕೇಂದ್ರ ಮುಖ್ಯಸ್ಥರಾಗಿದ್ದಾರೆ. ಇನ್ನುಳಿದ ಇಬ್ಬರು ಮಹಿಳಾ ಸಿಬ್ಬಂದಿಯು ಅಂಚೆ ಕಚೇರಿಯವರು. ಪಾಸ್‌ಪೋರ್ಟ್‌ ಮುದ್ರಣ ಹಾಗೂ ವಿತರಣೆ ಕೆಲಸ ಜಲಂಧರ್‌ನ ಕಚೇರಿಯಲ್ಲಿ ನಡೆಯಲಿದೆ.

ಸದ್ಯ ಈ ಕೇಂದ್ರದಲ್ಲಿ ನಿತ್ಯ 50 ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಮುಂದೆ 100ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಕಪುರ್ತಲಾ, ನವಂಧರ್ ಹಾಗೂ ಜಲಂಧರ್‌ನ ಜನರಿಗೆ ಈ ಕೇಂದ್ರ ನೆರವಾಗಲಿದೆ ಎಂದು ಸಂಪ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT