ವಿದ್ಯುತ್‌ ದರ: ಶೇ 6ರಷ್ಟು ಏರಿಕೆ

7

ವಿದ್ಯುತ್‌ ದರ: ಶೇ 6ರಷ್ಟು ಏರಿಕೆ

Published:
Updated:
ವಿದ್ಯುತ್‌ ದರ: ಶೇ 6ರಷ್ಟು ಏರಿಕೆ

ಬೆಂಗಳೂರು: ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ ಶೇ 6ರಷ್ಟು ಏರಿಕೆ ಮಾಡಲಾಗಿದೆ.

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2018–19ರ ಸಾಲಿನ ಪರಿಷ್ಕೃತ ವಿದ್ಯುತ್ ದರಗಳನ್ನು ಸೋಮವಾರ ಪ್ರಕಟಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 25 ಪೈಸೆಯಿಂದ 38 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಉಳಿದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಏಕರೂಪದ ಏರಿಕೆ ಮಾಡಲಾಗಿದೆ. ಇಲ್ಲಿ ಏರಿಕೆ ಪ್ರಮಾಣ 20 ಪೈಸೆಯಿಂದ 60 ಪೈಸೆಯಷ್ಟು ಇದೆ. ಹೊಸ ದರ ಏಪ್ರಿಲ್‌ 1ರಿಂದಲೇ ಪೂರ್ವಾನ್ವಯವಾಗಲಿದೆ.

ಬಳಕೆಗೆ ಅನುಗುಣವಾಗಿ ದರ ಪರಿಷ್ಕರಣೆ ಮಾಡಲಾಗಿದೆ. ಗೃಹ ಬಳಕೆಗೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿ 20 ಪೈಸೆಯಿಂದ 30 ಪೈಸೆಯಷ್ಟು, ಕೈಗಾರಿಕಾ ಬಳಕೆಗೆ 20 ಪೈಸೆಯಿಂದ 30 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಕುಡಿಯುವ ನೀರು ಸರಬರಾಜು ಮಾಡುವ ಎಲ್‌.ಟಿ ಮಾರ್ಗಗಳಲ್ಲಿ ಪ್ರತಿ ಯೂನಿಟ್‌ ದರವನ್ನು ₹4.25ರಿಂದ ₹4.40ಕ್ಕೆ ಹಾಗೂ ಎಚ್‌.ಟಿ ಮಾರ್ಗಗಳಲ್ಲಿ ₹4.85ರಿಂದ ₹5ಕ್ಕೆ ಹೆಚ್ಚಿಸಲಾಗಿದೆ.

ಪ್ರತಿ ಉಪವಿಭಾಗದಲ್ಲಿ ಮೂರು ತಿಂಗಳಿಗೊಮ್ಮೆ ಗ್ರಾಹಕ ಸಂಪರ್ಕ ಸಭೆಗಳನ್ನು ನಡೆಸುವಂತೆ ಆಯೋಗ ನಿರ್ದೇಶನ ನೀಡಿದೆ.

ಕೆಇಆರ್‌ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ವರ್ಷ ಶೇ 8ರಷ್ಟು (ಪ್ರತಿ ಯೂನಿಟ್‌ಗೆ 48 ಪೈಸೆ) ಏರಿಕೆ ಮಾಡಲಾಗಿತ್ತು. ಗ್ರಾಹಕರಿಗೆ ಹೊರೆಯಾಗದಂತೆ ಈ ಸಲ ಕನಿಷ್ಠ ಪ್ರಮಾಣದ ಏರಿಕೆ ಮಾಡಲಾಗಿದೆ. ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂಗಳು) ಪ್ರತಿ ಯೂನಿಟ್‌ಗೆ 82 ಪೈಸೆಯಿಂದ ₹1.62 ವರೆಗೆ (ಶೇ 14) ಏರಿಕೆ ಮಾಡುವಂತೆ ಕೋರಿದ್ದವು’ ಎಂದರು.

‘ಮಳೆ ಅಭಾವದಿಂದಾಗಿ ಜಲವಿದ್ಯುತ್‌ ಘಟಕಗಳಲ್ಲಿ ನಿರೀಕ್ಷಿಸಿದಷ್ಟು ವಿದ್ಯುತ್‌ ಲಭಿಸಿಲ್ಲ. ಹೊಸ ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಹೆಚ್ಚಿನ ಬೆಲೆಗೆ ವಿದ್ಯುತ್‌ ಖರೀದಿ ಮಾಡಲಾಯಿತು. ಇದರಿಂದಾಗಿ ₹2,485 ಕೋಟಿ ಕೊರತೆ ಉಂಟಾಯಿತು. ಹೀಗಾಗಿ ದರ ಪರಿಷ್ಕರಣೆ ಅನಿವಾರ್ಯ’ ಎಂದು ಅವರು ಸ್ಪಷ್ಟಪಡಿಸಿದರು.

 

ವಾರ್ಷಿಕ ವರಮಾನ ನಿರೀಕ್ಷೆ (₹ಕೋಟಿಗಳಲ್ಲಿ)

ವಿದ್ಯುತ್‌ ಪೂರೈಕೆ ಸಂಸ್ಥೆ; ಪ್ರಸ್ತಾವ; ಅನುಮೋದನೆ

ಬೆಸ್ಕಾಂ; 19,680.34; 19,236.16

ಮೆಸ್ಕಾಂ; 3,818.75; 3,245.7

ಸೆಸ್ಕಾಂ; 4,952.71; 4,129.32

ಹೆಸ್ಕಾಂ; 8,510.48; 7,279.54

ಜೆಸ್ಕಾಂ; 5,729.03; 4,707.08

ಹುಕ್ಕೇರಿ ಆರ್‌ಇಸಿಎಸ್; 212.28; 176.79

ಒಟ್ಟು; 42,903.59; 38,774.59

ನಿರ್ವಹಣಾ ನಷ್ಟ

ಕಂಪನಿ; ನಷ್ಟ (ಶೇ)

ಬೆಸ್ಕಾಂ; 13.19

ಮೆಸ್ಕಾಂ; 11.40

ಸೆಸ್ಕಾಂ; 11.40

ಹೆಸ್ಕಾಂ; 16.20

ಜೆಸ್ಕಾಂ; 17.33

ಎಲ್ಲಿ ಎಷ್ಟು ಏರಿಕೆ (₹ಗಳಲ್ಲಿ)

ಗೃಹ ಬಳಕೆ

ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ, ಪುರಸಭೆ ಪ್ರದೇಶ

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

0- 30; 3.25; 3.50

31- 100; 4.70; 4.95

101- 200; 6.25; 6.50

201- 300; 7.30; 7.55

301- 400; 7.35; 7.60

400 ಮೇಲ್ಪಟ್ಟು; 7.40; 7.65

ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಗ್ರಾಮೀಣ ಪ್ರದೇಶದ ಗೃಹ ಬಳಕೆದಾರರು

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

0- 30; 3.15; 3.40

31- 100; 4.40; 4.65

101- 200; 5.95; 6.20

201- 300; 6.80; 7.05

300 ಮೇಲ್ಪಟ್ಟು; 6.85; 7.10

ನಾಲ್ಕು ಎಸ್ಕಾಂಗಳ ನಗರ ಪಾಲಿಕೆ, ಪುರಸಭೆ ವ್ಯಾಪ್ತಿಗೆ ಗೃಹಬಳಕೆ

ಬಳಕೆ ಪ್ರಮಾಣ (ಯೂನಿಟ್); ಪ್ರಸ್ತುತ ದರ; ಪರಿಷ್ಕೃತ ದರ

0- 30; 3.25; 3.45

31- 100; 4.70; 4.95

101- 200; 6.25; 6.50

200 ಮೇಲ್ಪಟ್ಟು; 7.30; 7.55

ನಾಲ್ಕು ಎಸ್ಕಾಂಗಳ ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಗೃಹಬಳಕೆ

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

0- 30; 3.15; 3.35

31- 100; 4.40; 4.65

101- 200; 5.95; 6.20

200 ಮೇಲ್ಪಟ್ಟು; 6.80; 7.05

ಕೈಗಾರಿಕೆ ಬಳಕೆ ಎಲ್‍ಟಿ ವಿದ್ಯುತ್

ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ, ಇತರೆ ಪುರಸಭೆಗಳಲ್ಲಿ ಬಳಕೆ

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

0- 500; 5.25; 5.55

500 ಮೇಲ್ಪಟ್ಟು; 6.50; 6.75

ನಾಲ್ಕು ಎಸ್ಕಾಂಗಳ ಪುರಸಭೆ ಪ್ರದೇಶದ ಕೈಗಾರಿಕೆಗಳು

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

0- 500; 5.10; 5.30

500 ಮೇಲ್ಪಟ್ಟು; 6.05; 6.25

ಕೈಗಾರಿಕೆ ಬಳಕೆ ಎಚ್‍ಟಿ ವಿದ್ಯುತ್

ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ, ಇತರೆ ಪುರಸಭೆಗಳಲ್ಲಿ ಬಳಕೆ

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

1 ಲಕ್ಷ ಯೂನಿಟ್‍ವರೆಗೆ; 6.65; 6.90

1 ಲಕ್ಷ ಯೂನಿಟ್ ಮೇಲ್ಪಟ್ಟು; 6.95; 7.20

ಬೆಸ್ಕಾಂ ವ್ಯಾಪ್ತಿಯ ಉಳಿದ ಪ್ರದೇಶ

1 ಲಕ್ಷ ಯೂನಿಟ್‍ವರೆಗೆ; 6.60; 6.80

1 ಲಕ್ಷ ಯೂನಿಟ್ ಮೇಲ್ಪಟ್ಟು; 6.80; 7

ಇತರೆ ಎಸ್ಕಾಂ ವ್ಯಾಪ್ತಿಯ ಎಚ್‍ಟಿ ಕೈಗಾರಿಕೆಗಳು

1 ಲಕ್ಷ ಯೂನಿಟ್‍ವರೆಗೆ; 6.60; 6.75

1 ಲಕ್ಷ ಯೂನಿಟ್ ಮೇಲ್ಪಟ್ಟು; 6.80; 7

ವಾಣಿಜ್ಯ ಬಳಕೆ ಎಲ್‍ಟಿ ವಿದ್ಯುತ್

ಬಿಬಿಎಂಪಿ, ಪುರಸಭೆ ಒಳಗೊಂಡಂತೆ ನಗರ ಸ್ಥಳೀಯ ಸಂಸ್ಥೆಗಳು

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

0- 50 ಯೂನಿಟ್; 7.50; 7.75

50 ಯೂನಿಟ್ ಮೇಲ್ಪಟ್ಟು; 8.50; 8.75

ಗ್ರಾಮಾಂತರ ಪ್ರದೇಶ

0- 50; ಯೂನಿಟ್; 7; 7.25

50 ಯೂನಿಟ್ ಮೇಲ್ಪಟ್ಟು; 8; 8.25ವಾಣಿಜ್ಯ ಬಳಕೆ ಎಚ್‍ಟಿ ವಿದ್ಯುತ್

ಬಿಬಿಎಂಪಿ ಸೇರಿದಂತೆ ಎಸ್ಕಾಂಗಳ ನಗರ ಸ್ಥಳೀಯ ಸಂಸ್ಥೆಗಳು

ಬಳಕೆ ಪ್ರಮಾಣ (ಯೂನಿಟ್); ಈಗಿನ ದರ; ಪರಿಷ್ಕೃತ ದರ

2 ಲಕ್ಷ ಯೂನಿಟ್‍ವರೆಗೆ; 8.45; 8.70

2 ಲಕ್ಷ ಯೂನಿಟ್ ಮೇಲ್ಪಟ್ಟು; 8.55; 8.80ಬೆಸ್ಕಾಂ ವ್ಯಾಪ್ತಿಯ ಇತರೆ ಪ್ರದೇಶ

2 ಲಕ್ಷ ಯೂನಿಟ್‍ವರೆಗೆ; 8.25; 8.50

2 ಲಕ್ಷ ಯೂನಿಟ್ ಮೇಲ್ಪಟ್ಟು; 8.35; 8.60ಇತರೆ ಎಸ್ಕಾಂಗಳ ಎಲ್ಲ ಪ್ರದೇಶ

2 ಲಕ್ಷ ಯೂನಿಟ್‍ವರೆಗೆ; 8.25; 8.45

2 ಲಕ್ಷ ಯೂನಿಟ್ ಮೇಲ್ಪಟ್ಟು; 8.35; 8.55

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry