4

ಅಂಚೆ ಮತ ಎಣಿಕೆ

Published:
Updated:
ಅಂಚೆ ಮತ ಎಣಿಕೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆಯ ಮೊದಲ ಹಂತವಾಗಿ ಅಂಚೆ ಮತಗಳ ಎಣಿಕೆ ಆರಂಭವಾಗಿದೆ.

ಮಂಗಳವಾರ ಬೆಳಿಗ್ಗೆ ಮತ ಎಣಿಕೆ ನಡೆಯುವ ಎಲ್ಲಾ ಕೇಂದ್ರಗಳಲ್ಲಿ ಸ್ಟ್ರಾಂಗ್‌ ರೂಂಗಳನ್ನು ಭದ್ರತೆಯೊಂದಿಗೆ ತೆರೆಯಲಾಗಿದ್ದು, ಎಣಿಕೆ ಸ್ಥಳಕ್ಕೆ ತರಲಾಗಿದೆ.

ಮೊದಲ ಹಂತವಾಗಿ ಅಂಚೆ ಮತಗಳ ಎಣಿಕೆ ಮಾಡಲಾಗುತ್ತಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರ ಅಂಚೆ ಮತ ಎಣಿಕೆ ಮಾಡಲಾಗುತ್ತಿದ್ದು, 454 ಅಂಚೆ ಮತಗಳಿವೆ. ಪದ್ಮನಾಭನಗರದಲ್ಲಿ ಒಟ್ಟು ಅಂಚೆ ಮತಗಳು 283 ಇವೆ.

ಬಾದಾಮಿ ಕ್ಷೇತ್ರದ ಅಂಚೆ ಮತ ಎಣಿಕೆ ಆರಂಭ ವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯಿಂದ ಬಳ್ಳಾರಿ ಸಂಸದ ಶ್ರೀರಾಮುಲು ಸ್ಪರ್ಧಿಸಿರುವ ಕಾರಣ ಬಾದಾಮಿ ದೇಶದ ಗಮನ ಸೆಳೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ  ಮುನ್ನಡೆ ಪಡೆದಿದ್ದಾರೆ.

* ಕೊಪ್ಪಳ ಕ್ಷೇತ್ರದಲ್ಲಿ 1709 ಅಂಚೆ ಮತಗಳು ಚಲಾವಣೆಯಾಗಿವೆ.

ದಾವಣಗೆರೆಯಲ್ಲಿ ಅಂಚೆ ಮತ ಎಣಿಕೆಯಲ್ಲಿ 6ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಮುನ್ನಡೆ. ಹರಪನಹಳ್ಳಿ, ಮಾಯಕೊಂಡ ಕ್ಷೇತ್ರಗಳಲ್ಲಿ ಬಿಜೆಪಿ, ದಾವಣಗೆರೆ ಉತ್ತರ, ದಕ್ಷಿಣ, ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿಯಲ್ಲಿ ಕಾಂಗ್ರೆಸ್ ಮುನ್ನಡೆ ಇದೆ.

* ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಮೊದಲ ಸುತ್ತಿನಲ್ಲಿ 1768 ಮತಗಳ ಮುನ್ನಡೆ.

* ಕುಮಟಾ: ಯಲ್ಲಾಪುರ ಕ್ಷೇತ್ರದ  ಮೊದಲ ಸುತ್ತಿನ‌ ಎಣಿಕೆ ಆರಂಭ. ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಆರ್.ವಿ. ದೇಶಪಾಂಡೆ ಮುನ್ನಡೆ.

ಚಿಕ್ಕಮಗಳೂರು: ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಸುರೇಶ್ ಮುನ್ನಡೆ.

* ಚಿಕ್ಕಮಗಳೂರು: ಕಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ಪ್ರಕಾಶ್ (ಬೆಳ್ಳಿ ಪ್ರಕಾಶ್) ಮುನ್ನಡೆ.

ಬೀಳಗಿ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಬಿಜೆಪಿಯ ಮುರುಗೇಶ ನಿರಾಣಿಗೆ ಮುನ್ನಡೆ. ೩೫೫ ಮತಗಳ ಅಂತರದಿಂದ ಕಾಂಗ್ರೆಸ್ ನ ಜೆ.ಟಿ.ಪಾಟೀಲಗಿಂತ ಮುಂದೆ.

* ಬಂಟ್ವಾಳ ರಮಾನಾಥ ರೈ ಅವರಿಗೆ ಆರಂಭಿಕ ಹಿನ್ನಡೆ. ಸುಳ್ಯದಲ್ಲಿ ಆಂಗಾರ ಮುನ್ನಡೆ.

ಭದ್ರಾವತಿಯಲ್ಲಿ ಸಂಗಮೇಶ್ವರ ಶಿವಮೊಗ್ಗ ಪ್ರಸನ್ನಕುಮಾರ್ ಮುನ್ನಡೆ.

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಂಬುಲಿಂಗೇ ಗೌಡ(ಗಾಂಧಿವಾದಿ) ಪಕ್ಷೇತರ ಅಭ್ಯರ್ಥಿ ಮತ ಎಣಿಕೆ ಕೇಂದ್ರಕ್ಕೆ ಬಂದರು. ಪ್ರಜಾವಾಣಿ ಚಿತ್ರ: ಪಿ.ಎಸ್‌. ಕೃಷ್ಣಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry