ಶುಕ್ರವಾರ, ಫೆಬ್ರವರಿ 26, 2021
30 °C
ದಕ್ಷಿಣ ಕನ್ನಡದ 7 ಕ್ಷೇತ್ರಗಳ ಫಲಿತಾಂಶ ಪ್ರಶ್ನೆ

ಇವಿಎಂ ಮೇಲೆ ಶಂಕೆ‌: ಚುನಾವಣಾಧಿಕಾರಿಗೆ ದೂರು ಸಲ್ಲಿಕೆ – ಬಿ.‌ರಮಾನಾಥ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವಿಎಂ ಮೇಲೆ ಶಂಕೆ‌: ಚುನಾವಣಾಧಿಕಾರಿಗೆ ದೂರು ಸಲ್ಲಿಕೆ – ಬಿ.‌ರಮಾನಾಥ ರೈ

ಮಂಗಳೂರು: ಇವಿಎಂ ಯಂತ್ರಗಳ ಕಾರ್ಯಕ್ಷಮತೆಯ ಬಗ್ಗೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ ಎಂದು ಸಚಿವ ಬಿ.‌ರಮಾನಾಥ ರೈ ಹೇಳಿದರು.

ಮತ ಎಣಿಕೆ‌ ಕೇಂದ್ರದಿಂದ ಹೊರ ಬಂದ ಅವರು ಮಾಧ್ಯಮದ ಜೊತೆ ಮಾತನಾಡಿ, ಮೋದಿ ಅಲೆ ಏನೂ ಇಲ್ಲ. ನಾನು ಕ್ಷೇತ್ರದಲ್ಲಿ ಪುಷ್ಟೀಕರಣ ಮಾಡಿದ್ದೇನೆ ಎಂಬುದು ಸುಳ್ಳು. ಅಭಿವೃದ್ಧಿ ಕಾರ್ಯಕ್ರಮ ದಲ್ಲಿ ಜಾತಿ ಧರ್ಮ ನೋಡಿಲ್ಲ. ಆದರೆ, ಅಭಿವೃದ್ಧಿ ಕಾರ್ಯಕ್ರಮ ಗೌಣ ಮಾಡುವ ರೀತಿಯಲ್ಲಿ ಅಪಪ್ರಚಾರ ನಡೆದಿದೆ. ಅಭ್ಯರ್ಥಿಗಳನ್ನು ಅಧೀರರನ್ನಾಗಿಸಲು ಐಟಿ ರೈಡ್ ಮಾಡಲಾಗಿದೆ ಎಂದರು.

ಬಂಟ್ವಾಳ ಕ್ಷೇತ್ರದಲ್ಲಿ ನಡೆದ ಗಲಭೆಗಳು ಮತೀಯ ಸಂಘಟನೆಗೆ ಸಂಬಂಧಿಸಿದ್ದು. ಅದರಲ್ಲಿ ಪಕ್ಷದ ಪಾತ್ರ ವಿಲ್ಲ. ದೇಶದಲ್ಲಿ ಜಾತ್ಯತೀತ ಶಕ್ತಿಯನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದರು.‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.