ಮಂಗಳವಾರ, ಮಾರ್ಚ್ 9, 2021
23 °C

ಸಚಿವ ರುದ್ರಪ್ಪ ಲಮಾಣಿಗೆ ಸೋಲುಣಿಸಿದ ‘ಲಿಂಗಾಯತ’ ಮತದಾರರ

ಬಸವರಾಜ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಸಚಿವ ರುದ್ರಪ್ಪ ಲಮಾಣಿಗೆ ಸೋಲುಣಿಸಿದ ‘ಲಿಂಗಾಯತ’ ಮತದಾರರ

ಹುಬ್ಬಳ್ಳಿ: ಹಾವೇರಿ ವಿಧಾನಸಭಾ ಕ್ಷೇತ್ರ(ಪರಿಶಿಷ್ಟ ಜಾತಿ ಮೀಸಲು)ದಲ್ಲಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ 11.304  ಮತಗಳಿಂದ ಹೀನಾಯ ಸೋಲಾಗಿದೆ. ಇವರ ಪ್ರತಿಸ್ಪರ್ಧಿ ಬಿಜೆಪಿಯ ನೆಹರೂ ಓಲೇಕಾರ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್‌ನ ಲಿಂಗಾಯತ ಮುಖಂಡರು ಕೊನೆ ಗಳಿಗೆಯಲ್ಲಿ ಕೈಕೊಟ್ಟ ಕಾರಣ ಹಾಗೂ ಸಚಿವರ ಹಿಂಬಾಲಕರಿಂದ ಅಧಿಕಾರ ದುರುಪಯೋಗದಿಂದ ರುದ್ರಪ್ಪ ಲಮಾಣಿ ಸೋಲಲು ಮುಖ್ಯ ಕಾರಣ ಎಂಬ ವಿಶ್ಲೇಷಣೆ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

2008ರಲ್ಲಿ ಬಿಜೆಪಿಯಿಂದ ಜಯಗಳಿಸಿದ್ದ ನೆಹರೂ ಓಲೇಕಾರ ಅವರು  2008ರಲ್ಲಿ ಕೆಜೆಪಿ, ಬಿಜೆಪಿ ಇಬ್ಬಾಗದ ಪರಿಣಾಮ ಸೋಲುಂಡಿದ್ದರು. ಆದರೆ, ಇದೀಗ ಮತ್ತೊಮ್ಮೆ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.

ಮತದಾನಕ್ಕೂ ಎರಡು ದಿನ ಮೊದಲು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕ್ಷೇತ್ರದ ಲಿಂಗಾಯತ ಮುಖಂಡರೊಂದಿಗೆ ಗೌಪ್ಯ ಸಭೆ ನಡೆಸಿ, ಅವರ ಮನವೊಲಿಸಿದ ಪರಿಣಾಮ ಓಲೇಕಾರ ಜಯಗಳಿಸಲು ಮುಖ್ಯ ಕಾರಣ ಎಂಬ ಮಾತು ಕೇಳಿಬರುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.