4

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ 6 ಸ್ಥಾನ ಗೆಲುವು; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಮುಖಭಂಗ

Published:
Updated:
ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ 6 ಸ್ಥಾನ ಗೆಲುವು; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಮುಖಭಂಗ

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮುಖಭಂಗವಾಗಿದ್ದು, ಶಾಮನೂರು ಶಿವಶಂಕರಪ್ಪ ಅವರು ಹ್ಯಾಟ್ರಿಕ್ ಗೆಲುವು ಪಡೆದಿದ್ದಾರೆ.

ಜಿಲ್ಲೆಯ 8 ಕ್ಷೇತ್ರಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 2 ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಶಾಸಕರಾದ ಎಂ.ಪಿ.ರವೀಂದ್ರ ಹರಪನಹಳ್ಳಿ, ಚನ್ನಗಿರಿಯ ವಡ್ನಾಳ್ ರಾಜಣ್ಣ, ಹೊನ್ನಾಳಿಯ ಶಾಂತನಗೌಡ, ಜಗಳೂರು ಎಚ್.ಪಿ.ರಾಜೇಶ್ ಸೋಲು ಕಂಡಿದ್ದಾರೆ.

ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಲಿಂಗಣ್ಣ ಗೆಲುವು ಸಾಧಿಸಿದ್ದು, ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ 57 ಸಾವಿರ ಮತಗಳ ಅಂತರದಲ್ಲಿ ಗೆಲುವು ಕಂಡ ಸಚಿವ ಮಲ್ಲಿಕಾರ್ಜುನ ಅವರು ಈ ಬಾರಿ 4 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರ ವಿರುದ್ಧ ಸ್ಪರ್ಧಿಸಿ, ಸೋಲು ಕಂಡಿದ್ದ ಎಸ್.ಎ. ರವೀಂದ್ರನಾಥ ಈಗ ಗೆಲುವು ಕಂಡು ಸೇಡು ತೋರಿಸಿ ಕೊಂಡಿದ್ದಾರೆ.

ಬಳ್ಳಾರಿ ರೆಡ್ಡಿ ಸಹೋದರ ಅಳ್ವಿಕೆ ಹರಪನಹಳ್ಳಿಯಲ್ಲಿ ಮತ್ತೆ ಪುನರಾವರ್ತನೆ ಆಗಿದೆ. ಜಿ.ಕರುಣಾಕರ ರೆಡ್ಡಿ ಗೆಲುವು ಕಂಡಿದ್ದಾರೆ. ಮೊದಲು ಟಿಕೆಟ್ ತಪ್ಪಿಸಿಕೊಂಡು ನಂತರ ಹಠ ಹಿಡಿದು ಟಿಕೆಟ್ ಪಡೆದಿದ್ದ ಜಗಳೂರು ರಾಜೇಶ್ ಸೋಲು ಕಂಡಿದ್ದಾರೆ.

ಹೊನ್ನಾಳಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಗೆಲುವು ದಾಖಲಿಸಿದ್ದಾರೆ. ಚನ್ನಗಿರಿಯಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷ ಗೆಲ್ಲುವ ಮೂಲಕ ಚನ್ನಗಿರಿಯ ಇತಿಹಾಸ ಒಮ್ಮೆ ಗೆದ್ದವರು ಇನ್ನೊಮ್ಮೆ ಗೆಲ್ಲದ ಪರಂಪರೆಯನ್ನು ಮುಂದುವರಿಸಿದ್ದಾರೆ.

ಹರಿಹರದಲ್ಲಿ ಕಾಂಗ್ರೆಸ್‌ನ ಎಸ್‌. ರಾಮಪ್ಪ ಗೆಲುವು ಪಡೆದಿದ್ದಾರೆ. ಬಿಜೆಪಿಯ ಬಿ.ಪಿ. ಹರೀಶ್‌ ಸೋಲುಕಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry