ಬೆಳಗಾವಿ: ಪತ್ನಿಗೆ ಗೆಲುವು, ಪತಿಗೆ ಸೋಲು

7

ಬೆಳಗಾವಿ: ಪತ್ನಿಗೆ ಗೆಲುವು, ಪತಿಗೆ ಸೋಲು

Published:
Updated:
ಬೆಳಗಾವಿ: ಪತ್ನಿಗೆ ಗೆಲುವು, ಪತಿಗೆ ಸೋಲು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಪ್ರತ್ಯೇಕ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ದಂಪತಿಯಲ್ಲಿ ಪತ್ನಿ ಶಶಿಕಲಾ ಜೊಲ್ಲೆ ಗೆಲುವಿನ ನಗೆಬೀರಿದ್ದು, ಪತಿ ಅಣ್ಣಾ ಸಾಹೇಬ ಜೊಲ್ಲೆ ಸೋಲನ್ನಪ್ಪಿದ್ದಾರೆ.

ನಿಪ್ಪಾಣಿಯ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಮರು ಆಯ್ಕೆಯಾಗಿದ್ದು. ಚಿಕ್ಕೋಡಿ–ಸದಲಗಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ ಕಾಂಗ್ರೆಸ್‌ನ ಗಣೇಶ ಹುಕ್ಕೇರಿ ಎದುರು ಸೋತಿದ್ದಾರೆ. ಈ ಹಿಂದೆ 2004ರಲ್ಲಿ ಸದಲಗಾ ಕ್ಷೇತ್ರದಲ್ಲಿ ಪ್ರಕಾಶ ಹುಕ್ಕೇರಿ ವಿರುದ್ಧ ಸೋತಿದ್ದ ಅಣ್ಣಾ ಸಾಹೇಬ ಜೊಲ್ಲೆ ಮತ್ತೆ ಸೋತಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಬ್ಬರದ ಪ್ರಚಾರ ನಡೆಸಿದ್ದರೂ ಸಹ ಒಂದೆಡೆ ಮಾತ್ರ ಯಶಸ್ಸು ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry