ಶುಕ್ರವಾರ, ಮಾರ್ಚ್ 5, 2021
17 °C

ದಾರದೆಳೆಯ ಹಿಡಿದು ಬಾನಿಂದ ಭುವಿಗಿಳಿಯುತ

ಎಚ್‌.ಎಸ್‌.ಟಿ.ಸ್ವಾಮಿ Updated:

ಅಕ್ಷರ ಗಾತ್ರ : | |

ದಾರದೆಳೆಯ ಹಿಡಿದು ಬಾನಿಂದ ಭುವಿಗಿಳಿಯುತ

‘ಪ್ಯಾರಾಚೂಟ್’ ಎಂದರೆ ಸಾಕು ತೊಂದರೆಗೆ ಈಡಾದ ವಿಮಾನದಿಂದ ಜೀವ ಉಳಿಸಿಕೊಳ್ಳಲು ಅತೀ ಹೆಚ್ಚು ಚಾಲಕರು ಬಳಸುವ ಸಾಧನ, ಎಂಬುದು ಹಲವರ ಭಾವನೆ. ಯುದ್ಧದ ಸಮಯದಲ್ಲಿ ರಾತ್ರಿವೇಳೆ ವಿಮಾನಗಳಿಂದ ಆಗುವ ಅಪಘಾತವನ್ನು ತಪ್ಪಿಸಲು, ನೂರಾರು ಸೈನಿಕರನ್ನು ಇಳಿಸಲು ಪ್ಯಾರಾಚೂಟ್‌ ಅನ್ನು ಬಳಸುತ್ತಾರೆ.

ಪ್ಯಾರಾಚೂಟ್ ಹಾರಾಟದಲ್ಲಿ ಒದಗುವ ತುರ್ತು ಪರಿಸ್ಥಿತಿಗಳಲ್ಲಿ ಜೀವ ಉಳಿಸಲು ಮತ್ತು ರಣರಂಗಗಳಲ್ಲಿ ಯೋಧರನ್ನು ಆಕಾಶದಿಂದ ಬಾನಿಗೆ ಮುಟ್ಟಿಸಲು ಹೆಚ್ಚಾಗಿ ಬಳಸಿದ್ದರೂ, ಇದೊಂದು ಸಾಹಸಮಯ ಹಾಗೂ ಜನಪ್ರಿಯ ಆಕಾಶ ಕ್ರೀಡೆಯಾಗಿರುವುದು ಸ್ಕೈ ಡೈವಿಂಗ್ ಒಂದು ಅಡಿಪಾಯವಾಗಿದೆ.

ಸ್ಕೈ ಡೈವಿಂಗ್‌ನ ಮೊದಲ ಪ್ರಯತ್ನ ನಡೆದು ಅನೇಕ ವರ್ಷಗಳಾಗಿದ್ದರೂ, ಕ್ರಿ.ಶ.1802 ರಲ್ಲಿ ಫ್ರಾನ್ಸಿನ ಗಾರ್ನರಿನ್ ಎಂಬ ಸಾಹಸಿಯು ಬಲೂನ್ ಒಂದರಲ್ಲಿ ಸುಮಾರು 8000 ಅಡಿಗಳ ಎತ್ತರಕ್ಕೆ ಏರಿ ಅಲ್ಲಿಂದ 23 ಅಡಿ ವ್ಯಾಸವಿರುವ ಪ್ಯಾರಾಚೂಟ್ ಅನ್ನು ಕಟ್ಟಿಕೊಂಡು ಕೆಳಗೆ ಧುಮುಕಿದ.  ಆಕಾಶದಲ್ಲಿ ತೇಲುತ್ತಿದ್ದಂತೆ ತೀವ್ರ ಗತಿಯಲ್ಲಿ ತೂಗಾಡಿದರೂ, ಗಾರ್ನರಿನ್ ನೆಲಮುಟ್ಟಿ ಪ್ಯಾರಾಚೂಟ್ ಅನ್ನು ಯಶಸ್ವಿಯಾಗಿ ಬಳಸುವವರಲ್ಲಿ ಮೊದಲಿಗನಾದ. ಮೊದಲು ದುಂಡನೆಯ ಆಕಾರದ ಪ್ಯಾರಚೂಟ್‌ಗಳನ್ನು ಬಳಸುತ್ತಿದ್ದರು. ಈಗ ಅವುಗಳ ವಿನ್ಯಾಸ ಬದಲಾಗಿದೆ.

ಸ್ಕೈ ಡೈವಿಂಗ್ ಕಲಿಯುವವರು ಪ್ರಾರಂಭಕ್ಕೆ, ವಿಮಾನದಿಂದ ಜಿಗಿದೊಡನೆ 3-4 ಸೆಕೆಂಡ್‌ಗಳ ಕಾಲ ಪ್ಯಾರಾಚೂಟ್ ತೆರೆದು ಕೆಳಗಿಳಿಯುವ ಮುನ್ನ ದೇಹವನ್ನು ಹೇಗೆ ಸಮತೋಲನದಲ್ಲಿರಿಸಿ ಸ್ಥಿರ ರೀತಿಯಲ್ಲಿ ತೇಲಬೇಕೆಂಬುದನ್ನು ಅಭ್ಯಾಸ ಮಾಡುತ್ತಾರೆ. ಗಂಟೆಗೆ 120 ಕಿ.ಮೀ. ಚಲಿಸಿ ಮೇಲೆ ಹೋಗಿ ಅದೇ ವೇಗದಲ್ಲಿ ಕೆಳಗಿಳಿಯುತ್ತದೆ.

ಈ ವೇಗದಲ್ಲಿ ಭೂವಾತಾವರಣದಲ್ಲಿ ಚಲಿಸುತ್ತಿರುವ ಮನುಷ್ಯನ ದೇಹವು ಒಂದು ಪುಟಾಣಿ ವಿಮಾನದಂತಾಗುತ್ತದೆ. ಮೇಲೆ ಸಾಗುವಾಗ ಕ್ಷಣ ಕ್ಷಣಕ್ಕೂ ದೂರ ಸಾಗುತ್ತಾ ಚಿಕ್ಕದಾಗುತ್ತಿರುವ ವಿಮಾನಗಳನ್ನು ಬಿಟ್ಟರೆ, ಸುತ್ತಮುತ್ತಲಿನ ನಿರ್ಜನ, ನಿಶ್ಶಬ್ದ ವಾತಾವರಣ ಯಾವುದೋ ಬೇರೆ ಲೋಕಕ್ಕೆ ಬಂದಂತೆ ಅನಿಸುತ್ತದೆ. ವಿಮಾನದಿಂದ ಜಿಗಿದು, ದೇಹವನ್ನು ಚಪ್ಪಟೆಯಾಗಿಸಿ ಸ್ಥಿರವಾಗಿ ತೇಲುವುದರಲ್ಲಿ ಪರಿಣಿತಿ ಹೊಂದಿದ ಮೇಲೆ, ಗಾಳಿಯಲ್ಲಿ ತೇಲುತ್ತಿದ್ದಂತೆ ವಿವಿಧ ಭಂಗಿಗಳನ್ನು ತಳೆದು ನಾನಾ ರೀತಿಯ ದೊಂಬರಾಟಗಳನ್ನು ನಡೆಸಬಹುದು. ಪ್ಯಾರಾಚೂಟ್ ತೆರೆಯದಿದ್ದ 30 ಸೆಕೆಂಡ್‌ಗಳಲ್ಲಿ ದೇಹವು 4800 ಅಡಿಗಳಷ್ಟು ಕೆಳಗೆ ಚಲಿಸಿರುತ್ತದೆ. 12 ಸೆಕೆಂಡ್‌ಗಳೊಳಗೆ ಗಂಟೆಗೆ 120 ಮೈಲಿಗಳ ವೇಗ ಹೊಂದುವುದರಿಂದ ಹಲವು ಕ್ಷಣಗಳ ನಂತರ ಕೆಳಗೆ ಸಾಗುವ ಅನುಭವವೇ ಇಲ್ಲವಾಗುತ್ತದೆ. ಕೆಲವು ಉಪಯುಕ್ತ ಉಪಕರಣಗಳನ್ನು ಉಪಯೋಗಿಸು ವುದರಿಂದ ಪ್ಯಾರಾಚೂಟ್ ಅನ್ನು ನಿಯಂತ್ರಿಸಿ ಕ್ಷೇಮವಾಗಿ ನೆಲ ಮುಟ್ಟಲು ಸ್ಕೈ ಡೈವಿಂಗ್ ಉಪಕರಣಗಳು ಸಹಾಯಮಾಡುತ್ತವೆ.

ಸ್ಕೈ ಡೈವಿಂಗ್‌ನಲ್ಲಿ ಇರುವ ದೊಡ್ಡ ವಿಪತ್ತು ಏನೆಂದರೆ, ವಿಮಾನದಿಂದ ಜಿಗಿದ ನಂತರ ಪ್ಯಾರಾಚೂಟ್ ತೆರೆದು

ಕೊಳ್ಳದಿರುವುದು. ಇತ್ತೀಚಿನ ವರ್ಷಗಳಲ್ಲಿ ಸ್ಕೈ ಡೈವಿಂಗ್ ಸಾಹಸಗಳು ಸುಧಾರಣೆಗೊಂಡಿವೆ. ಯಾವುದೇ ರೀತಿಯ ತೊಂದರೆಗೆ ಒಳಗಾಗದೇ ಸ್ಕೈ ಡೈವಿಂಗ್ ಒಂದು ಸಾಹಸಮಯ ಕ್ರೀಡೆಯಾಗಿ ಅಂತರಿಕ್ಷ ಯಾನಕ್ಕೆ ಸಹಕಾರಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.